ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ಕೆಎಸ್ಎಸ್ಪಿಯು ಕುಟುಂಬ ಸಂಗಮ
ಮುಳ್ಳೇರಿಯ: ಕೇರಳ ಸ್ಟೇಟ್ ಸವರ್ೀಸ್ ಪೆನ್ಶನರ್ಸ್ ಯೂನಿಯನ್(ಪಿಂಚಣಿದಾರರ ಯೂನಿಯನ್) ದೇಲಂಪಾಡಿ ಘಟಕದ ಆಶ್ರಯದಲ್ಲಿ ಕೆಎಸ್ಎಸ್ಪಿಯು ದೇಲಂಪಾಡಿ ಪಂಚಾಯತ್ ಮಟ್ಟದ ಕುಟುಂಬ ಸಂಗಮ ಅಡೂರಿನ ಪಂಚಾಯತ್ ಸಭಾ ಭವನದಲ್ಲಿ ಇತ್ತೀಚೆಗೆ ಜರಗಿತು.
ಕೆಎಸ್ಎಸ್ಪಿಯು ದೇಲಂಪಾಡಿ ಘಟಕ ಅಧ್ಯಕ್ಷ ಎಂ.ಗಂಗಾಧರನ್ ಅಧ್ಯಕ್ಷತೆ ವಹಿಸಿದರು. ದೇಲಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಮುಸ್ತಫ ಹಾಜಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪ್ರಭಾಕರ ಪೊದುವಾಳ್, ಎ.ನಾರಾಯಣನ್ ನಾಯರ್, ಕೆ.ವಿ.ನಾರಾಯಣನ್ ಭಾಗವಹಿಸಿದರು. ಇ.ಸಿ.ಕಣ್ಣನ್, ದಾಮೋದರ ಮಾಸ್ಟರ್, ಡಿ.ಕುಂಞಂಬು ಶುಭಹಾರೈಸಿದರು.
ಯೋಗ ಮತ್ತು ಆರೋಗ್ಯ ಬಗ್ಗೆ ವಿಷ್ಣುಪಾಲ ಬಿ, ನಿಯಮಾವಳಿಯ ಕುರಿತು ಎಂ.ಭಾಸ್ಕರನ್ ತರಗತಿ ನಡೆಸಿದರು. ದೇಲಂಪಾಡಿ ಘಟಕ ಕಾರ್ಯದಶರ್ಿ ಕೃಷ್ಣ ಕೆ. ಸ್ವಾಗತಿಸಿ, ಪಂಚಾಯತ್ ಘಟಕ ಸದಸ್ಯ ಪುತ್ತು ಗೌಡ ಪಿ. ವಂದಿಸಿದರು.




