ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ಇಂದು ಎನ್.ಡಿ.ಎ.ಯಿಂದ ಶಬರಿಮಲೆ ಸಂರಕ್ಷಣಾ ಯಾತ್ರೆ ಆರಂಭ
ಮಧೂರು: ಶಬರಿಮಲೆ ಆಚಾರ-ಅನುಷ್ಠಾನಗಳನ್ನು ಸಂರಕ್ಷಿಸಬೇಕು ಮತ್ತು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅಯ್ಯಪ್ಪ ಭಕ್ತರ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಸುವ ರಾಜ್ಯ ಸರಕಾರದ ನೀತಿಯನ್ನು ಪ್ರತಿಭಟಿಸಿ ಎನ್.ಡಿ.ಎ. ನೇತಾರರಾದ ನ್ಯಾಯವಾದಿ ಪಿ.ಎಸ್.ಶ್ರೀಧರನ್ ಪಿಳ್ಳೆ ಮತ್ತು ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ ಅವರ ನೇತೃತ್ವದ ಶಬರಿಮಲೆ ಸಂರಕ್ಷಣಾ ಯಾತ್ರೆ ಇಂದು ಮಧೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪರಿಸರದಿಂದ ಆರಂಭಗೊಳ್ಳಲಿದೆ.
ಮಧೂರು ಶ್ರೀ ಕ್ಷೇತ್ರ ಪರಿಸರದಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಯಾತ್ರೆ ಉದ್ಘಾಟನೆಗೊಳ್ಳಲಿದೆ. ಅಪರಾಹ್ನ 2 ಗಂಟೆಗೆ ನಗರದ ಕರಂದಕ್ಕಾಡಿನಿಂದ ಬೃಹತ್ ಮೆರವಣಿಗೆಯೊಂದಿಗೆ ನಗರ ಪ್ರದಕ್ಷಿಣೆ ನಡೆಸಿ ಅದ್ದೂರಿಯ ಸ್ವಾಗತ ನೀಡಿದ ಬಳಿಕ ನೀಲೇಶ್ವರಕ್ಕೆ ಸಾಗಲಿದೆ.
ಮಧೂರಿನಿಂದ ಆರಂಭಗೊಳ್ಳುವ ರಥಯಾತ್ರೆಯನ್ನು ಕನರ್ಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಕನರ್ಾಟಕ ವಿಧಾನಪರಿಷತ್ ನೇತಾರ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಕೇರಳ ಪ್ರಭಾರಿ ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯ ಸಭಾ ಸದಸ್ಯ ಪಿ.ಮುರಳೀಧರನ್, ಕೇರಳ ಕಾಂಗ್ರೆಸ್ ನೇತಾರ, ಮಾಜಿ ಸಚಿವ ಪಿ.ಸಿ.ಥೋಮಸ್, ಶಾಸಕರಾದ ಸಂಜೀವ ಮಠಂದೂರು, ದೇವದಾಸ್ ಕಾಮತ್, ಹರೀಶ್ ಪೂಂಜಾ, ಅಂಗಾರ, ಮಾಜಿ ಶಾಸಕ ರಾಜನ್ ಬಾಬು, ಶಾಸಕ ಒ.ರಾಜಗೋಪಾಲ್, ಸಿ.ಕೆ.ಪದ್ಮನಾಭನ್, ಕೆ.ಸುರೇಂದ್ರನ್, ಎ.ಎನ್.ರಾಧಾಕೃಷ್ಣನ್, ಶೋಭಾ ಸುರೇಂದ್ರನ್, ಎಂ.ಟಿ.ರಮೇಶ್ ಮೊದಲಾದವರು ಭಾಗವಹಿಸಿ ಮಾತನಾಡುವರು.
ಈ ರಥಯಾತ್ರೆ ಹಲವು ಜಿಲ್ಲೆಗಳಲ್ಲಿ ಸಾಗಿ ನ.13 ರಂದು ಪತ್ತನಂತಿಟ್ಟ ಜಿಲ್ಲೆಯಲ್ಲಿ ಬೃಹತ್ ರ್ಯಾಲಿಯೊಂದಿಗೆ ಸಮಾಪ್ತಿಗೊಳ್ಳಲಿದೆ.




