ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2018
ಕಣಿಪುರದಲ್ಲಿ ಇಂದು ಭಜನಾ ಸಂಕೀರ್ತನಾ ಮಂಡಲೋತ್ಸವ ಸಮಾರೋಪ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ಐತಿಹಾಸಿಕ ಭಜನಾ ಸಂಕೀರ್ತನ ಮಂಡಲದ 48ನೇ ದಿನವಾದ ಇಂದು(ಶುಕ್ರವಾರ) ಸಂಕೀರ್ತನಾ ಮಂಡಲದ ಸಮಾರೋಪ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಶುಕ್ರವಾರ ಪ್ರಾಥಃಕಾಲ 6ರಿಂದ ಸಂಜೆ 6 ರ ವರೆಗೆ ನಿರಂತರ ಭಜನಾ ಸಂಕೀರ್ತನೆ ನಡೆಯಲಿದೆ.ಬೆಳಿಗ್ಗೆ 10 ರಿಂದ ಭಕ್ತಾದಿಗಳಿಂದ ಶ್ರೀ ದೇವರಿಗೆ 108 ಪ್ರದಕ್ಷಿಣೆ ನಡೆಯಲಿದೆ. ಆ ಬಳಿಕ ನಡೆಯುವ ಸಮಾರೋಪದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಶ್ರೀಗಳು ಹಾಗು ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಆಶೀರ್ವಚನ ನೀಡುವರು.
ಭಜನಾ ಸಂಕೀರ್ತನೆಯ ಭಾಗವಾಗಿ ಬುಧವಾರ ಕುಂಬಳೆಯ ಕೀರ್ತನಾ ಕುಟೀರದ ತಂಡದಿಂದ ನಡೆಯಿತು.




