HEALTH TIPS

No title

                ತೌಳವ  ಪರಂಪರೆಯನ್ನು ಉಳಿಸುವಲ್ಲಿ ಕಂಬಳದ ಪಾತ್ರ ಹಿರಿದು
              ಜೋಡುಕರೆ ಅಣ್ಣ ತಮ್ಮ ಕಂಬಳವನ್ನು ಯಶಸ್ವಿಗೊಳಿಸಲು ಕರೆ
    ಉಪ್ಪಳ: ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಉಳಿಸುವಲ್ಲಿ ನಾಡಿನ ಜಾನಪದ ಕ್ರೀಡೆ ಕಂಬಳದ ಪಾತ್ರ ಅತ್ಯಂತ ಹಿರಿದು. ಸುಮಾರು 13 ವರ್ಷಗಳ ಬಳಿಕ ಕಾಸರಗೋಡು ಜಿಲ್ಲೆಯಲ್ಲಿ ಬೃಹತ್ ಮಟ್ಟದ ಕಂಬಳದ ಆಯೋಜನೆಗೆ ಸಿದ್ಧವಾಗಿರುವುದು ನಾಡಿಗೆ ಉತ್ಸವದ ಕಳೆಯನ್ನು ತರಲಿದೆ ಎಂದು  ಬೋಳಂಗಳ ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿಯ ಮುಖ್ಯ ಗೌರವ ಸಲಹೆಗಾರರಾದ ಪೈವಳಿಕೆ ಅರಮನೆಯ ರಂಗತ್ರೈ ಅರಸರು ಅಭಿಪ್ರಾಯಪಟ್ಟರು.
    ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲೆಯ ಪೈವಳಿಕೆ ಸಮೀಪದ ಲಾಲ್ಬಾಘ್ ಬೋಳಂಗಳದಲ್ಲಿ ನಡೆಯಲಿರುವ  ಅಣ್ಣ ತಮ್ಮ ಜೋಡುಕರೆ ಕಂಬಳದ ವಿಜ್ಞಾಪನಾ ಪತ್ರವನ್ನು ಗುರುವಾರ ಸಂಜೆ ಹೊಸಂಗಡಿ ಹಿಲ್ಸೈಡ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
   ನಾಡಿಗೆ ಹೆಮ್ಮೆ ಎನಿಸುವಂತಹ ಕಂಬಳವನ್ನು ಮತ್ತೆ ಪುರಜ್ಜೀವನಗೊಳಿಸುವಲ್ಲಿ ಪ್ರತಿಯೊಬ್ಬರು ಶಕ್ತಿಮೀರಿ ಪ್ರಯತ್ನವನ್ನು ನಡೆಸುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದರು.
    ಅಣ್ಣ ತಮ್ಮ ಜೋಡುಕರೆ ಕಂಬಳದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಕಂಬಳ ಸಮಿತಿಯ ಕಾಯರ್ಾಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರು ,  ಮಿನಿ ಭಾರತವೆಂಬ ಖ್ಯಾತಿಯ ಕಾಸರಗೋಡಿನಲ್ಲಿ ಅನಾದಿ ಕಾಲದ ಕಂಬಳದ ಜಾನಪದ ಕ್ರೀಡೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸ ಶ್ಲಾಘನೀಯ. ನಾಡಿಕ್ರೀಡೆಯ ಮೂಲಕ ನಮ್ಮೂರಿನ ಮಕ್ಕಳಿಗೆ ಪ್ರೀತಿ, ಸಾಮರಸ್ಯವನ್ನು ಹಸ್ತಾಂತರಿಸುವ ಕೆಲಸವೂ ನಡೆಯಲಿದೆ ಎಂದು ತಿಳಿಸಿದರು. ಕಂಬಳಕ್ಕೆ ಶಾಶ್ವತ ಸ್ಥಳವನ್ನು ಜಿಲ್ಲೆಯಲ್ಲಿ ಹೊಂದುವುದು ನಾಡಿನ ಹಿರಿಯ ರಾಜಕೀಯ ವ್ಯಕ್ತಿಗಳಾಗಿದ್ದ ದಿ.ಚೆರ್ಕಳಂ ಅಬ್ದುಲ್ಲ ಅವರ ಕನಸಾಗಿತ್ತು.  ಮುಂದಿನ ದಿನಗಳಲ್ಲಿ ಅದೂ ಸಾಧ್ಯವಾಗಲಿ ಎಂದು ಅವರು ಹಾರೈಸಿದರು.
 ಕಂಬಳ ಸಮಿತಿ ಮಹಾಪೋಷಕರಾದ ಭಾಸ್ಕರ್ ರೈ ಮಂಜಲ್ತೋಡಿ ಅವರು ಮಾತನಾಡಿ,  ಅನೇಕ ವರ್ಷಗಳ ನಂತರ  ಕಾಸರಗೋಡಿನಲ್ಲಿ ಕಂಬಳನ ನಡೆಯಲಿರುವುದು ಹೊಸ ಇತಿಹಾಸವನ್ನು ಸೃಷ್ಟಿಲಿದೆ. ಇದು ಸರ್ವ ಮತಗಳು, ಸರ್ವ ರಾಜಕೀಯ ಪಕ್ಷಗಳ ಮತ್ತು ಸಮಸ್ತ ಜನರ ಆಶ್ರಯದಲ್ಲಿ ನಡೆಯಲಿರುವುದು ವಿಶೇಷ. ಅಣ್ಣ ತಮ್ಮ ಜೋಡುಕರೆ ಕಂಬಳ ಕೇವಲ ಈ ಬಾರಿಗಷ್ಟೇ ಅಲ್ಲದೆ ಮುಂದಿನ ಪ್ರತಿ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಮಾಡುವ ಪ್ರಯತ್ನವನ್ನೂ ಮಾಡಲಾಗುವುದು ಎಂದು ತಿಳಿಸಿದರು.
   ಈ ಸಂದರ್ಭ ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿಯ ಮಹಾಪೋಷಕಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಧಿಕಾರಿ ಚೇತನಾ .ಎಂ, ಸಮಿತಿ ಅಧ್ಯಕ್ಷ ಅಜಿತ್.ಎಂ.ಸಿ, ಪೈವಳಿಕೆ ಪಂ.ಅಧ್ಯಕ್ಷತೆ ಭಾರತಿ.ಜೆ.ಶೆಟ್ಟಿ, ಮಾಜಿ ಪಂ.ಅಧ್ಯಕ್ಷ ಅಚ್ಯುತ ಚೇವಾರು,  ಪ್ರಧಾನ ಕಾರ್ಯದಶರ್ಿ ಹರೀಶ್ ಶೆಟ್ಟಿ ಕಡಂಬಾರ್,  ಗೌರವ ಸಲಹೆಗಾರ ಮಾರಪ್ಪ ಭಂಡಾರಿ ಕೌಡೂರುಬೀಡು, ರಾಮ ಪ್ರಸಾದ್ ಕಲ್ಲೂರಾಯ,  ಕೋಶಾಧಿಕಾರಿ ಅಂಕಿತ್ ಶೆಟ್ಟಿ, ಸಂಘಟನಾ ಕಾರ್ಯದಶರ್ಿ ವಿಶ್ವನಾಥ ಗೌಡ,  ಉಪಾಧ್ಯಕ್ಷರಾದ್  ಝೆಡ್.ಎ.ಕಯ್ಯಾರ್, ಹರೀಶ್ ಭಂಡಾರಿ ಕೌಡೂರುಬೀಡು ಮೊದಲಾದವರು ಉಪಸ್ಥಿತರಿದ್ದರು.
   ಕಂಬಳ ಸಮಿತಿ ಪ್ರಧಾನ ಸಂಚಾಲಕ ಅಶ್ವಥ್ ಪೂಜಾರಿ ಲಾಲ್ಬಾಘ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries