HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಏಮ್ಸ್ ಕೇರಳಕ್ಕೆ ಅನುಮೋದಿಸಲ್ಪಡಬೇಕು-ಜಿಲ್ಲೆಯಲ್ಲೇ ನಿಮರ್ಾಣವಾಗಬೇಕು- ಸಂಸದ ಪಿ.ಕರುಣಾಕರನ್ ಮುಳ್ಳೇರಿಯ: ಏಮ್ಸ್ ವೈದ್ಯಕೀಯ ಆಸ್ಪತ್ರೆಯು ಕೇರಳಕ್ಕೆ ಅನುಮೋದಿಸಲ್ಪಡಬೇಕು ಮಾತ್ರವಲ್ಲ ಜಿಲ್ಲೆಯ ಪ್ರಶಸ್ತ ಸ್ಥಳದಲ್ಲಿ ಅದು ನಿಮರ್ಾಣವಾಗಬೇಕು ಎಂದು ಸಂಸದ ಪಿ.ಕರುಣಾಕರನ್ ಹೇಳಿದರು. ಏಮ್ಸ್ ಆಸ್ಪತ್ರೆ ನಿಮರ್ಾಣಕ್ಕೆ ಅಗತ್ಯವಾದ ಎಲ್ಲ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಸಂಸದರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಕಾಞಂಗಾಡಿನಲ್ಲಿ ನಡೆದ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಒಟ್ಟು ಮೂರು ಪ್ರಮುಖ ತೀಮರ್ಾನವನ್ನು ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಕೇಂದ್ರೀಯ ವಿ.ವಿ ಪರಿಸರದಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿಮರ್ಾಣದ ಕುರಿತು ಈ ಹಿಂದೆಯೇ ಮಾತುಕತೆ ನಡೆದಿದೆ. ವಿ.ವಿಯ ಉನ್ನತ ಅಧಿಕಾರಿಗಳ ತಂಡ ಈ ನಿಟ್ಟಿನಲ್ಲಿ ಮನವಿಯನ್ನು ನೀಡಿದ್ದು ಪರಿಗಣನೆಯಲ್ಲಿದೆ ಎಂದರು. ಮಗದೊಮ್ಮೆ ಕೇಂದ್ರ ವರಿಷ್ಠರಲ್ಲಿ ಮನವಿ ಸಲ್ಲಿಸಿ ಆಸ್ಪತ್ರೆ ನಿಮರ್ಾಣದ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಲಾಗುವುದು ಎಂದರು. ಅದೇ ರೀತಿ ಕೇಂದ್ರ ಸರಕಾರವು ಕೇರಳಕ್ಕೆ ಪ್ರತ್ಯೇಕ ಏಮ್ಸ್ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ಅನುಮೋದಿಸಬೇಕು. ಕಾಸರಗೋಡಿನಂತಹ ಹಿಂದುಳಿದ ಪ್ರದೇಶದ ಮೂಲಭೂತ ಅವಶ್ಯಕತೆಯನ್ನು ಗಮನದಲ್ಲಿರಿಸಿ ಜಿಲ್ಲೆಗೆ ಏಮ್ಸ್ ಅಗತ್ಯತೆಯ ಬಗ್ಗೆ ಮನವಿಯನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ ಸಹಿತ ಆರೋಗ್ಯ ಸಚಿವರಿಗೆಖೀ ಹಿಂದೆ ನೀಡಲಾಗಿದೆ. ಆದರೆ ಏಮ್ಸ್ ಅನುಮೋದಿಸುವ ಬಗ್ಗೆ ಅಂತಿಮ ತೀಮರ್ಾನವಾಗಿಲ್ಲ, ಕೇರಳದಲ್ಲಿ ನಿಮರ್ಾಣ ಹೊಂದಲಿರುವ ಏಮ್ಸ್ ಆಸ್ಪತ್ರೆ ಕಾಸರಗೋಡಿನಲ್ಲಿ ಸ್ಥಾಪನೆಯಾಗಬೇಕೆಂಬುದು ಎಲ್ಲರ ಅಭಿಮತವಾಗಿದೆ ಎಂದು ಅವರು ಹೇಳಿದರು. ಕೇಂದ್ರೀಯ ವಿ.ವಿಯಲ್ಲಿ ನಡೆದ ವಿವಿಧ ವಿದ್ಯಾಥರ್ಿ ಸಂಘಗಳ ಪ್ರತಿಭಟನೆಗಳು ಆಸ್ಪತ್ರೆ ಅನುಮೋದನೆಗೆ ಅಡ್ಡಗಾಲಾಗಿದೆ ಎಂಬುದು ಅಸಮಂಜಸ. ವಿವಿಧ ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ಏಮ್ಸ್ ಅನುಮೋದನೆಯನ್ನು ಸ್ವಾಗತಿಸಲಿವೆ, ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ನಿಮರ್ಾಣ ಆರೋಗ್ಯ ಕ್ಷೇತ್ರದ ಹೊಸ ಮನ್ವಂತರ ಸೃಷ್ಠಿಗೆ ಪೂರಕವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries