ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ಅಗಲ್ಪಾಡಿ ನೂತನ ಸಭಾ ಭವನದ ವಿಜ್ಞಾಪನಾ ಪತ್ರ ಬಿಡುಗಡೆ
ಬದಿಯಡ್ಕ: ಮಠ, ಮಂದಿರಗಳು ಅಭಿವೃದ್ಧಿಯನ್ನು ಹೊಂದಿದರೆ ಊರೇ ಅಭಿವೃದ್ಧಿಯಾಗುವುದಲ್ಲದೆ, ಸಮಾಜಮುಖೀ ಕಾರ್ಯಗಳು ನಡೆಸಲು ಹೆಚ್ಚಿನ ಬಲ ತುಂಬಿದಂತಾಗುತ್ತದೆ. ಇಲ್ಲಿ ನಿಮರ್ಾಣವಾಗಲಿರುವ ಸುಸಜ್ಜಿತವಾದ ಸಭಾಭವನ ಈ ನಿಟ್ಟಿನಲ್ಲಿ ಜನೋಪಯೋಗಕ್ಕೆ ಲಭ್ಯವಾಗಲಿ ಎಂದು ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮೊಕ್ತೇಸರ ಮಧುಸೂದನ್ ಆ0ುರ್ ಅಭಿಪ್ರಾಯಪಟ್ಟರು.
ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ವತಿಯಿಂದ ನೂತನವಾಗಿ ನಿಮರ್ಿಸಲಿರುವ ಸಭಾಭವನದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ದೀಪಪ್ರಜ್ವಲನೆಗೈದು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಲಕ್ಕಿಕೂಪನ್ ಬಿಡುಗಡೆ:
ಹಿರಿ0ು ಧಾಮರ್ಿಕ ಮುಂದಾಳು ಮಧುಕರ ರೈ ಕೊರೆಕ್ಕಾನ ನೂತನ ಸಭಾಭವನಕ್ಕಿರುವ ನಿಧಿ ಸಂಗ್ರಹಕ್ಕಾಗಿ ಹಮ್ಮಿಕೊಂಡ ಲಕ್ಕೀಕೂಪನ್ ಬಿಡುಗಡೆ ಗೊಳಿಸಿ ಮಾತನಾಡುತ್ತಾ ಮಂದಿರವು ಸದಾ ಅಭಿವೃದ್ಧಿಯನ್ನು ಕಾಣುತ್ತಿದ್ದು, ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಮುನ್ನುಗ್ಗಿದಾಗ ಗುರಿಯನ್ನು ಸೇರಲು ಸಾಧ್ಯ. ದೈವಬಲದ ಜೊತೆಗೆ ಜನಬಲವೂ ಇದ್ದಾಗ ನಿರೀಕ್ಷಿತ ಕಾರ್ಯ ಸಫಲವಾಗುತ್ತದೆ ಎಂದರು.
ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ಟರ್ ಅಗಲ್ಪಾಡಿ ಅಧ್ಯಕ್ಷತೆ0ುನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಜೀವ ಶೆಟ್ಟಿ ಮೊಟ್ಟಕುಂಜ, ರಾಜೇಶ್ ಮಜೆಕ್ಕಾರ್, ನಾರಾ0ುಣ ಕಾಟುಕುಕ್ಕೆ, ಲಕ್ಷ್ಮೀನಾರಾ0ುಣ ಭಟ್ ತಲೇಕ, ನ್ಯಾ0ುವಾದಿ ಶಿವರಾಮ್ ಮಣಿ0ಾಣಿ ಮಂಗಳೂರು, ಹರಿನಾರಾ0ುಣ ಮಾಸ್ತರ್ ಅಗಲ್ಪಾಡಿ, ಸಂತೋಷ್ ಟಿ ಮಂಗಳೂರು, ಶ್ರೀಕೃಷ್ಣ ಎಂಬ್ರಾಂತಿರಿ, ಶಾಂತಾ ಶ್ರೀಕುಮಾರ್, 0ಾದವ ಸೇವಾಸಂಘದ ಉಪಾಧ್ಯಕ್ಷ ರತ್ನಾಕರ ಅಗಲ್ಪಾಡಿ ವೇದಿಕೆ0ುಲ್ಲಿ ಉಪಸ್ಥಿತರಿದ್ದರು. ರಾಮಚಂದ್ರ ಭಟ್ ಉಪ್ಪ0ಗಳ ನಿರೂಪಿಸಿದರು. ರಾಜೇಶ್ ಮಾಸ್ಟರ್ ಅಗಲ್ಪಾಡಿ ಕಾ0ರ್ುಕ್ರಮದ ನೇತೃತ್ವವನ್ನು ವಹಿಸಿದ್ದರು. ಕುಮಾರಿ ಮಾನಸ ಅಗಲ್ಪಾಡಿ ಮತ್ತು ಸಂಗಡಿಗರು ಪ್ರಾರ್ಥನೆಯನ್ನು ಹಾಡಿದರು. ಪ್ರಾರಂಭದಿಂದ ಕೊನೆಯ ತನಕ ಪಾಲ್ಗೊಂಡವರ ನೊಂದಾವಣಾ ಸಂಖ್ಯೆಯನ್ನು ಆಧರಿಸಿ ಅದೃಷ್ಟ ಚೀಟಿ0ು ಮೂಲಕ ಬಹುಮಾನ ವಿತರಿಸಲಾಯಿತು. ಕಮಲಾ ಸತ್ಯಶಂಕರ್ ಮಾರ್ಪನಡ್ಕ, ಅಶಾರಘು ಮಾರ್ಪನಡ್ಕ, ರಂಜಿತ್ ಮಾಸ್ಟರ್ ಆಗಲ್ಪಾಡಿ ಕ್ರಮವಾಗಿ ಪ್ರಥಮ, ದ್ವಿತೀ0ು ಮತ್ತು ತೃತೀ0ು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.




