ಎಕೆಪಿಎ 34ನೇ ಕಾಸರಗೋಡು ಜಿಲ್ಲಾ ಸಮ್ಮೇಳನ
0
ಡಿಸೆಂಬರ್ 06, 2018
ಕಾಸರಗೋಡು: ಆಧುನಿಕ ಯುಗದಲ್ಲಿ ಛಾಯಾಗ್ರಹಣ ರಂಗವು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ಸಂಘಟನಾ ಶಕ್ತಿಯಿಂದ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ. ಕಳೆದ 34ವರ್ಷಗಳಿಂದ ಅನೇಕ ಜಟಿಲ ಸಮಸ್ಯೆಗಳನ್ನು, ಕಷ್ಟಗಳನ್ನು ಒಗ್ಗಟ್ಟಿನಿಂದ ಎದುರಿಸಿ ರಾಜ್ಯದಲ್ಲಿ ಬಲಿಷ್ಠ ಸಂಘಟನೆಯಾಗಿ ಎಕೆಪಿಎ ಹೊರಹೊಮ್ಮಿದೆ ಎಂದು ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)ನ ಕೇರಳ ರಾಜ್ಯ ಅಧ್ಯಕ್ಷ ಎಂ.ಜಿ.ರಾಜು ತಿಳಿಸಿದರು.
ಅವರು ಮಂಗಳವಾರ ಚೆರ್ವತ್ತೂರು ತಿಮರಿ ಕೋ ಓಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ (ಎಕೆಪಿಎ) 34ನೇ ಕಾಸರಗೋಡು ಜಿಲ್ಲಾ ಸಮ್ಮೇಳನವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಎಕೆಪಿಎ ಜಿಲ್ಲಾ ಅಧ್ಯಕ್ಷ ಎನ್.ಎ.ಭರತನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಕೆಪಿಎ ರಾಜ್ಯ ಕಾರ್ಯದರ್ಶಿ ಜೋಯ್ ಗ್ರೇಸ್ ವ್ಯಾಪಾರ ಮೇಳವನ್ನು ಉದ್ಘಾಟಿಸಿದರು. ಎಕೆಪಿಎ ರಾಜ್ಯ ಕಾರ್ಯಕಾರೀ ಸಮಿತಿ ಸದಸ್ಯ ಪ್ರಶಾಂತ್ ತೈಕಡಪ್ಪುರಂ, ಎಕೆಪಿಎ ರಾಜ್ಯ ಸಮಿತಿ ಸದಸ್ಯ ಸುದರ್ಶನನ್ ಟಿ.ಎಂ., ಎಕೆಪಿಎ ಕ್ಷೇಮನಿಧಿ ಸಂಚಾಲಕ ಹರೀಶ್ ಪಾಲಕುನ್ನು, ಜಿಲ್ಲಾ ಪೋಟೋಗ್ರಫಿ ಕ್ಲಬ್ ಸಂಚಾಲಕ ಶ್ರೀಜಿತ್ ನಿಲಾಯಿ, ಜಿಲ್ಲಾ ಪಿ.ಆರ್.ಒ. ಸುಕು ಸ್ಮಾರ್ಟ್, ಕಾಸರಗೋಡು ವಲಯ ಅಧ್ಯಕ್ಷ ಗೋವಿಂದನ್ ಚಂಗರಂಕಾಡ್, ನೀಲೇಶ್ವರ ವಲಯ ಅಧ್ಯಕ್ಷ ಗೋಕುಲನ್, ಕಾಞಂಗಾಡು ವಲಯ ಅಧ್ಯಕ್ಷ ಶರೀಫ್ ಫ್ರೇಮ್ ಆರ್ಟ್ ಸಮಾರಂಭದಲ್ಲಿ ಪಾಲ್ಗೊಂಡು ಶುಭಾಶಂಸನೆಗೈದರು. ಜಿಲ್ಲಾ ಕಾರ್ಯದರ್ಶಿ ವಾಸು ಎ. ವರದಿ ಹಾಗೂ ಜಿಲ್ಲಾ ಕೋಶಾಧಿಕಾರಿ ಕಲಾಧರನ್ ಪೆರಿಯ ಲೆಕ್ಕಪತ್ರ ಮಂಡಿಸಿದರು.
ಜಿಲ್ಲಾ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡ ಫೋಟೋಗ್ರಫಿ ಸ್ಪರ್ಧೆಯಲ್ಲಿ ಗೋವಿಂದನ್ ಚಂಗರಂಗಾಡು ಪ್ರಥಮ, ನಾಸರ್ ದ್ವಿತೀಯ, ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಅಭಿಲಾಷ್ ಕಾಸರಗೋಡು ಪ್ರಥಮ ಹಾಗೂ ಉಣ್ಣಿ ಸರಿಗ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.
ಚೆನ್ನಮ್ಮ ಚಾಂಡಿ ಕುನ್ನತ್ ಮೆಮೋರಿಯಲ್, ಟಿ.ವಿ.ಮಾಧವಿಯಮ್ಮ ಮೆಮೋರಿಯಲ್, ಗೋವಿಂದನ್ ವಿಶ್ವಕರ್ಮನ್ ಮೆಮೋರಿಯಲ್, ಜಾನ್ಸಿ ನಾರಾಯಣನ್ ಮೆಮೋರಿಯಲ್ ವಿದ್ಯಾಭ್ಯಾಸ ಪ್ರತಿಭಾ ಪುರಸ್ಕಾರಗಳನ್ನು ಅರ್ಹ ಸದಸ್ಯರ ಮಕ್ಕಳಿಗೆ ನೀಡಲಾಯಿತು. ಎಕೆಪಿಎ ಜಿಲ್ಲಾ ಜತೆಕಾರ್ಯದರ್ಶಿಗಳಾದ ರಮೇಶನ್ ಮಾವುಂಗಾಲ್, ಅನೂಪ್ ಚಂದೇರ, ಸುಧೀರ್ ಕೆ. ಮೊದಲಾದವರು ಪಾಲ್ಗೊಂಡಿದ್ದರು. ಎಕೆಪಿಎ ಜಿಲ್ಲಾ ಕಾರ್ಯದರ್ಶಿ ವಾಸು ಎ. ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ಮನೋಹರನ್ ಎನ್.ವಿ.ಎಸ್. ಧನ್ಯವಾದವನ್ನಿತ್ತರು. ಮಧ್ಯಾಹ್ನ ಚೆರ್ವತ್ತೂರು ಪೇಟೆಯಲ್ಲಿ ಆಕರ್ಷಕ ಮೆರವಣಿಗೆಯನ್ನು ನಡೆಸಲಾಯಿತು. ಅಪರಾಹ್ನ ಪ್ರತಿನಿಧಿ ಸಮ್ಮೇಳನವು ನಡೆಯಿತು. ಛಾಯಾಗ್ರಹಣರಂಗದಲ್ಲಿ ಸಾಧನೆಗೈದ ದಿನೇಶ್ ಇನ್‍ಸೈಟ್, ಶ್ರೀಜಿತ್ ನಿಲಾಯಿ, ಶಿಬಿರೋಯಲ್, ದಿನೇಶ್ ಪುತಿಯಪುರಯಿಲ್, ಸುರೇಶ್ ಬಾಬು ಜಾನ್ಸಿ ಮೊದಲಾದವರನ್ನು ಅಭಿನಂದಿಸಲಾಯಿತು.






