ಬದಿಯಡ್ಕದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ-ಮೀಸಲಾತಿಗೆ ಆಗ್ರಹ
0
ಡಿಸೆಂಬರ್ 06, 2018
ಬದಿಯಡ್ಕ: ಸರಕಾರಿ ಅನುದಾನದಿಂದ ನಡೆಯುತ್ತಿರುವ ಶಿಕ್ಷಣ ಮತ್ತು ಶಿಕ್ಷಣೇತರ ವಲಯದಲ್ಲಿ ಪರಿಶಿಷ್ಟಜಾತಿ/ವರ್ಗದವರಿಗೆ ಮೀಸಲಾತಿ ನೀಡಬೇಕು ಎಂದು ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಸರಕಾರವನ್ನು ಒತ್ತಾಯಿಸಿದೆ.
ನೆರೆಯ ಕರ್ನಾಟಕ ರಾಜ್ಯದಲ್ಲಿ ಈ ಹಿಂದೆಯೇ ಈ ವ್ಯವಸ್ಥೆಯು ಜಾರಿಗೊಂಡು ನಮಗೆ ಮಾದರಿಯಾಗಿದ್ದರೂ ಕೇರಳದಲ್ಲಿ ಪಟ್ಟಭದ್ರ ಹಿತಾಸಕ್ತಿ ಮತ್ತು ಸವರ್ಣ ಮೇಧಾವಿತ್ವವನ್ನು ಕೇರಳವು ಅನುಸರಿಸುತ್ತದೆ ಎಂದು ಸಮಿತಿಯು ಹೇಳಿದೆ.
ಬದಿಯಡ್ಕದಲ್ಲಿ ಡಾ| ಬಿ.ಆರ್. ಅಂಬೇಡ್ಕರ್‍ರ 63ನೇ ಪರಿನಿರ್ವಾಣ ದಿನದಂಗವಾಗಿ ನಡೆದ ಸಮಾರಂಭದಲ್ಲಿ ಸಮಿತಿಯು ಈ ನಿಟ್ಟಿನಲ್ಲಿ ಸರಕಾರವನ್ನು ಒತ್ತಾಯಿಸಿದೆ. ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಉಪಾಧ್ಯಕ್ಷ ವಸಂತ ಅಜಕ್ಕೋಡು ಸಮಾರಂಭದ ಅಧ್ಯಕ್ಷತೆ ವಹಿಸಿ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಪ್ರಧಾನ ಕಾರ್ಯದರ್ಶಿ ಶಂಕರ ಡಿ., ಕೃಷ್ಣದಾಸ್ ದರ್ಭೆತ್ತಡ್ಕ, ಗೋಪಾಲ ಡಿ., ರಾಮ ಪಟ್ಟಾಜೆ, ಸುಂದರ ಮಾಲಂಗೈ, ಸುಂದರಿ ಮಾರ್ಪನಡ್ಕ, ಸುಧಾಕರ ಬೆಳ್ಳಿಗೆ, ಸುಂದರ ಬಾರಡ್ಕ, ಸುರೇಶ್ ಅಜಕ್ಕೋಡು, ಅನಿಲ್ ಅಜಕ್ಕೋಡು ಉಪಸ್ಥಿತರಿದ್ದg




