ಆಲಪ್ಪುಳದಲ್ಲಿ ಜರಗಿದ 59 ನೇ ಕೇರಳ ಸ್ಟೇಟ್ ಸ್ಕೂಲ್ ಕಲೋತ್ಸವ.. ಮಲಯಾಳಿ ನೆಲದಲ್ಲಿ ಮಿಂಚಿದ ಕನ್ನಡ ನಾಟಕವಾದ ಕೊಂಬುಮೀಸೆ
0
ಡಿಸೆಂಬರ್ 08, 2018
ಮಂಜೇಶ್ವರ: ಉಪ ಜಿಲ್ಲೆ ಮತ್ತು ಚೆರ್ವತ್ತೂರು ನಲ್ಲಿ ನಡೆದ ಜಿಲ್ಲಾ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ವಿಭಿನ್ನ ಶೈಲಿಯ ನಾಟಕ ಮನೋಹರವಾದ ಮಕ್ಕಳ ಅಭಿನಯದ ಜೊತೆಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲು ಮಕ್ಕಳು ಅಭಿನಯಿಸಿದ "ಕೊಂಬು ಮೀಸೆ" ನಾಟಕವು ಮಲಯಾಳಿ ಮಣ್ಣಿನಲ್ಲಿ ಕನ್ನಡದ ಧ್ವನಿಯಾಗಿ ಉತ್ತಮ ನಟ ಉತ್ತಮ ನಟಿ ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದು ಅಚ್ಚರಿ ಮೂಡಿಸಿತ್ತು. 6 ಮಲಯಾಳಂ ನಾಟಕಗಳ ಜೊತೆಗೆ ಏಕಾಂಗಿ ಕನ್ನಡ ನಾಟಕವನ್ನು ಪ್ರದರ್ಶಿಸಿದ ಮಕ್ಕಳ ಅಭಿನಯ ಚಾತುರ್ಯಕ್ಕೆ ನೆರೆದ ಪ್ರೇಕ್ಷಕವರ್ಗ ಮೂಕ ವಿಸ್ಮಿತರಾಗಿದ್ದರು.
ಪ್ರಸ್ತುತ ವಿದ್ಯಮಾನಗಳ ಹಿಂದೆ ನಡೆದ ಕಥೆಯಲ್ಲಿ ಧಮನಿ ಸಲ್ಪಡುವ ದಲಿತನ ಕೂಗು ಹಸಿವೆಯ ತೀವ್ರತೆಗೆ ಮಡಿದು ಬೀಳುವ ಮಕ್ಕಳು ಸಹ ಜೀವಿಗಳು ಮಹಾಮಾರಿ ಪ್ರಳಯದಿಂದ ನಿರಾಶ್ರಿತರಾದ ಅವರ ಕೂಗು ಒಂದು ಅನ್ನಕ್ಕೂ ಹಲವಾರು ಜೀವಗಳ ಬೆಲೆ ಇದೆ ಎಂಬ ಸಂದೇಶದೊಂದಿಗೆ ಒಂದು ಶಾಲೆಯ ಅಧ್ಯಾಪಕನ ಸುತ್ತ ಹೆಣೆದ ನಾಟಕ ವಿನೂತನರಂಗ ಶೈಲಿ ಪ್ರಬುದ್ಧ ಸಂಭಾಷಣೆ ಮೋಹಕ ಸಂಗೀತದೊಂದಿಗೆ ಪ್ರೇಕ್ಷಕರ ರಂಗಕರ್ಮಿಗಳ ಅಭಿನಂದನೆಗೆ ಪಾತ್ರವಾಯಿತು.
ಉತ್ತಮ ನಟನಾಗಿ ಆಯ್ಕೆಯಾಗಿದ್ದ ವೆಂಕಟೇಶ ಮಾಧವ ಮಾಸ್ಟರ ಪಾತ್ರಕ್ಕೆ ಹೊಸ ಆಯಾಮವನ್ನು ಕೊಟ್ಟರೆ ಶಾಲೆಯನ್ನು ಸಹ ಜೀವಿಗಳನ್ನು ಪ್ರೀತಿಸುವ ಕೀರ್ತಿಯ ಪಾತ್ರದ ಮೂಲಕ ಉತ್ತಮ ನಟಿಯಾಗಿ ಮಿಂಚಿದ ಕುಮಾರಿ ಸ್ವರ್ಣ ಜಿಲ್ಲೆಯ ಕನ್ನಡ ಮಕ್ಕಳ ಪ್ರತಿಭೆಗೆ ಸರಿಸಾಟಿ ಯಾರು ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಳು. ಉಪ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಕನ್ನಡ ನಾಟಕಕ್ಕೆ ಅನ್ಯಾಯವಾದಾಗ ಅಪೀಲಿನ ಮೂಲಕ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಅವಕಾಶ ಗಿಟ್ಟಿಸಿಕೊಂಡು ಮುಂದೆ ತಂಡ ರಾಜ್ಯ ದಲ್ಲಿ ಮಿಂಚಿದಾಗ, ಕನ್ನಡ ಮಕ್ಕಳ ಮೇಲ್ಮನವಿಯಲ್ಲಿ ಹುರುಳಿತ್ತು ಎಂಬುದಕ್ಕೆ ಸಾಕ್ಷಿಯಾಯಿತು.
ಈ ರಂಗಯಾತ್ರೆಯಲ್ಲಿ ಜೊತೆಯಾಗಿನಿಂತ ತಂಡದ ಸಂಚಾಲಕರು, ಶಾಲಾವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್, ಮುಖ್ಯೋಪಾಧ್ಯಾಯರಾದ ರಾಮಚಂದ್ರ ಭಟ್.ಎನ್, ತಂಡದ ಪ್ರಬಂಧಕ ಮತ್ತು ಸಹನಿರ್ದೇಶನ ಮಾಡಿದ ಶಿವಪ್ರಸಾದ್ ಚೆರುಗೋಳಿ, ಪ್ರಶಾಂತ ಹೊಳ್ಳ ಎನ್, ಮನೋಹರ ಸಂಗೀತವನ್ನು ನೀಡಿದ ಮೆಲ್ವಿನ್ ಪೆರ್ಮುದೆ,ರಂಗಪರಿಕರ,ಮುಖವರ್ಣಿಕೆಯಲ್ಲಿ ವಿಶೇಷ ಕಾಳಜಿ ವಹಿಸಿದ ವರದರಾಜ ಬಾಯರು ಹಾಗೂ ವಸಂತ ಮೂಡಂಬೈಲು,ಶಾಲಾ ಅಧ್ಯಾಪಕಾರಾದ ಪ್ರದೀಪ್ ಕರ್ವಾಜೆ, ಉಷಾಪದ್ಮ, ಉಷಾ ಕೆ ಆರ್,ಶಿವನಾರಾಯಣ ಭಟ್ ಸಹಕರಿಸಿದರು.




