ಭಾರತೀಯ ಸಂಸ್ಕøತಿ ಉಳಿಸಿ ಬೆಳೆಸುವುದು ಕರ್ತವ್ಯ-ರಾಜನ್ ಮುಳಿಯಾರ್
0
ಡಿಸೆಂಬರ್ 08, 2018
ಬದಿಯಡ್ಕ: ಪಂಚಭೂತಗಳ ನಾಥನಾದ ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ಪರಂಪರಾಗತ ಆಚಾರಗಳ ರಕ್ಷಣೆಗಾಗಿ ಕೇರಳದಾದ್ಯಂತ ಮಹಿಳೆಯರೇ ಮುಂಚೂಣಿಯಲ್ಲಿದ್ದು ಅಯ್ಯಪ್ಪ ನಾಮಸ್ಮರಣೆಯ ಮೂಲಕ ಜನಜಾಗೃತಿ ಉಂಟುಮಾಡುತ್ತಿದ್ದಾರೆ. ನಾವು ನಂಬಿಕೊಂಡು ಬಂದ ಆಚಾರಗಳಿಂದ ಭಾರತೀಯ ಸಂಸ್ಕøತಿಯು ನೆಲೆನಿಂತಿದೆ. ಅದನ್ನು ಉಳಿಸಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜನ್ ಮುಳಿಯಾರು ತನ್ನ ಧಾರ್ಮಿಕ ಉಪನ್ಯಾಸದಲ್ಲಿ ತಿಳಿಸಿದರು.
ಅವರು ಶನಿವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಬದಿಯಡ್ಕ ಇದರ ಮೂವತ್ತೈದನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಯೋರ್ವನಿಗೂ ಅವರದ್ದೇ ಆದ ಆಚಾರಗಳಿವೆ. ಅಯ್ಯಪ್ಪ ಸ್ವಾಮಿಯ ಕ್ಷೇತ್ರ ಚೈತನ್ಯದ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ ಮಾತ್ರ ಧರ್ಮ ನಮ್ಮನ್ನು ರಕ್ಷಿಸಬಲ್ಲುದು. ದುಷ್ಟರನ್ನು ಹಾಗೂ ಧರ್ಮಹೀನರನ್ನು ಕಟ್ಟಿಹಾಕುವವನೇ ಧರ್ಮಶಾಸ್ತಾರನಾಗಿದ್ದಾನೆ. ಧರ್ಮಕ್ಕೆ ವಿರುದ್ಧವಾಗಿ ನಾವು ನಡೆಯಬಾರದು. ದಿನದ ಆರಂಭದಿಂದ ರಾತ್ರಿ ಮಲಗುವ ತನಕ ಭಾರತೀಯ ಸಂಸ್ಕøತಿಯಿದೆ. ವಾರದ ಏಳು ದಿನಗಳಲ್ಲಿ ಪ್ರತಿಯೊಂದು ದಿನಕ್ಕೂ ಅದರದ್ದೇ ಆದ ಮಹತ್ವವಿದೆ ಎಂಬುದು ವಾರಗಳ ಹೆಸರಿನಲ್ಲಿಯೇ ಸೂಚಿತವಾಗಿದೆ ಎಂದು ಅವರು ತಿಳಿಸಿದರು.
ಉದ್ಯಮಿ ವಸಂತ ಪೈ ಬದಿಯಡ್ಕ ದೀಪ ಬೆಳಗಿಸಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪಾಪಪುಣ್ಯಗಳನ್ನು ಸಮಾನವಾಗಿ ಸ್ವೀಕರಿಸಿ ಭಕ್ತಿಯ ಮಾರ್ಗದಿಂದ ನಾವು ಸನ್ಮಾರ್ಗದತ್ತ ಮುಖಮಾಡಬೇಕು. ಸದಾ ಸತ್ ಚಿಂತನೆಗಳ ಮೂಲಕ ಭಕ್ತಿಯಿಂದ ಭಗವಂತನ ಸೇವೆಯನ್ನು ಮಾಡಿದರೆ ಒಳತನ್ನು ನೀಡುತ್ತಾನೆ. ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ಮೋಕ್ಷ ಸಾಧನೆಗೆ ದಾರಿಯಾಗಬಲ್ಲುದು ಎಂದರು.
ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಗೋಪಾಲ ಮಾಸ್ಟರ್ ಬದಿಯಡ್ಕ, ತಿರುಪತಿ ಕುಮಾರ ಭಟ್ ಶುಭಾಶಂಸನೆಗೈದರು. ಭಾಸ್ಕರ ಗುರುಸ್ವಾಮಿ ಮತ್ತು ಕೃಷ್ಣ ಗುರುಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಗೋಕುಲ ಬದಿಯಡ್ಕ ಸ್ವಾಗತಿಸಿ, ಜತೆಕಾರ್ಯದರ್ಶಿ ಚರಣ್ ಕುಮಾರ್ ಎಂ. ವಂದಿಸಿದರು. ನಿರಂಜನ ರೈ ಪೆರಡಾಲ ನಿರೂಪಣೆಗೈದರು.
ಸಭಾಕಾರ್ಯಕ್ರಮದ ನಂತರ ಶರಣಂ ವಿಳಿ, ಮಹಾಪೂಜೆ, ಅನ್ನದಾನ ನಡೆಯಿತು. ಅಪರಾಹ್ನ ನಾರಾಯಣ ಮೂಲಡ್ಕ ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ `ಭೀಷ್ಮಾರ್ಜುನ', ಸಾಯಂಕಾಲ ವಿದುಷಿ ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾಲಯ ಕುಂಬಳೆ ಇವರ ಶಿಷ್ಯ ವೃಂದದವರಿಂದ ನೃತ್ಯ ಸಂಭ್ರಮ, ಪ್ರತೀಶ್ ಕುಂಡಡ್ಕ ಮತ್ತು ಬಳಗದವರಿಂದ ಭಕ್ತಿರಸಮಂಜರಿ, ರಾತ್ರಿ ಮಲ್ಲ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ `ಇಂದ್ರಜಿತು ಅಗ್ರಪೂಜೆ ರಕ್ತರಾತ್ರಿ' ಪ್ರದರ್ಶನಗೊಂಡಿತು.




