ಸೈಬರ್ ಕ್ರೈಂ ಜಾಗೃತಿ ವಿಚಾರಗೋಷ್ಠಿ
0
ಡಿಸೆಂಬರ್ 08, 2018
ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಮಾಜ ವಿಜ್ಞಾನ ಕ್ಲಬ್‍ನ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಜಾಗೃತಿ ವಿಚಾರಗೋಷ್ಠಿ ಇತ್ತೀಚೆಗೆ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಸರಗೋಡು ಜಿಲ್ಲಾ ಸೈಬರ್ ಕ್ರೈಂ ಬ್ರಾಂಚ್‍ನ ಪೋಲಿಸ್ ಅಧಿಕಾರಿ ಶಿವಕುಮಾರ್ ಅವರು ಪ್ರಸ್ತುತ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲ ತಾಣಗಳ ಉಪಯೋಗ, ಸುರಕ್ಷತೆ, ಅಪರಾಧಗಳು ಹಾಗೂ ವಿದ್ಯಾರ್ಥಿಗಳು ವಹಿಸಬೇಕಾದ ಜಾಗೃತಿ ಇವುಗಳ ಕುರಿತಾಗಿ ಮಾಹಿತಿ ನೀಡಿದರು. ಶಾಲಾ ಹಿರಿಯ ಅಧ್ಯಾಪಿಕೆ ಲಲಿತಾ ಸ್ವಾಗತಿಸಿ, ಅಧ್ಯಾಪಕ ಶಿವಶಂಕರ ಭಟ್ ವಂದಿಸಿದರು.





