ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಅನಂತಪುರ ಭೇಟಿ
0
ಡಿಸೆಂಬರ್ 08, 2018
ಕುಂಬಳೆ: ಮಲೆಯಾಳದ ಖ್ಯಾತ ಚಲನಚಿತ್ರ ನಟ, ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಗುರುವಾರ ಸಂಜೆ ಜಿಲ್ಲೆಯ ಪ್ರಸಿದ್ದ ದೇವಾಲಯವಾದ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯವನ್ನು ಸಂದರ್ಶನ ನಡೆಸಿ ದೇವರ ದರ್ಶನ ಪಡೆದರು. ಕ್ಷೇತ್ರದ ಅರ್ಚಕರು, ಆಡಳಿತ ಮಂಡಳಿ ಸದಸ್ಯರು, ಕುಂಬಳೆ ಗ್ರಾ.ಪಂ. ಸದಸ್ಯ ಸುಧಾಕರ ಕಾಮತ್, ಸಾಮಾಜಿಕ ಮುಖಂಡ ವಿಕ್ರಂ ಪೈ ಕುಂಬಳೆ ಮೊದಲಾದವರು ಈ ಸಂದರ್ಭ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸುರೇಶ್ ಗೋಪಿ ಅವರು ಬಳಿಕ ಕೊಲ್ಲೂರು ಶ್ರೀಮೂಕಾಂಬಿಕ ಕ್ಷೇತ್ರಕ್ಕೆ ತೆರಳಿದರು.




