ಮಹ್ದನುಲ್ ಊಲೂಂ ಮದ್ರಸ ಕಟ್ಟಡ ಉದ್ಘಾಟನೆ
0
ಡಿಸೆಂಬರ್ 08, 2018
ಮಂಜೇಶ್ವರ: ಕುಂಜತ್ತೂರು ಜಮಾಅತ್ ಸಮಿತಿಯ ನೇತೃತ್ವದಲ್ಲಿ ಕಾರ್ಯಾಚರಿಸುವ ಮಹ್ ದನುಲ್ ಉಲೂಂ ಮದ್ರಸಕ್ಕೆ ಕುಂಜತ್ತೂರು ಪ್ರವಾಸಿ ಫೋರಂ (ಜಿ ಸಿ ಸಿ) ಯ ವತಿಯಿಂದ ನೂತನವಾಗಿ ನಿರ್ಮಿಸಿ ಕೊಟ್ಟ ಕಟ್ಟಡದ ಉದ್ಘಾಟನೆ ಮಸೀದಿ ಅಂಗಣದಲ್ಲಿ ಶುಕ್ರವಾರ ನಡೆಯಿತು.
ಕಟ್ಟಡ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಅಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನಿರ್ವಹಿಸಿದರು.
ಬಳಿಕ ಜಮಾಹತ್ ಅಧ್ಯಕ್ಷ ಡಾಕ್ಟರ್ ಕೆ ಎ ಖಾದರ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕುಂಜತ್ತೂರು ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಆಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಫ್ರಿ ಮುತ್ತು ಕೋಯ ತಂಙಳ್, ತ್ವಾಖಾ ಆಹ್ಮದ್ ಮುಸ್ಲಿಯಾರ್, ಅತಾವುಲ್ಲ ತಂಙಳ್, ಕುಂಜತ್ತೂರು ಖತೀಬ್ ಹಾಶಿರ್ ಅಲ್ ಹಾಮಿದಿಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮೊಯ್ದೀನ್ ಕುಂಞÂ ಹಾಜಿ ಪ್ರಿಯಾ, ಇಬ್ರಾಹಿಂ ಹಾಜಿ ಕೆ ಎ, ಸಯ್ಯದ್ ಎಂ ಕೆ. ಎ ಆರ್ ಅಬ್ದುಲ್ ರಹ್ಮಾನ್ ಹಾಜಿ, ಕೆ ಕೆ ಮೊಹಮ್ಮದ್ ಫೈಝಿ, ತೌಸೀಫ್ ಆಹ್ಮದ್ ಹನೀಫಿ, ಪ್ರವಾಸಿ ಫಾರಂ ಸಂಯೋಜಕರಾದ ಅಮ್ಮಿ ಪ್ರಿಯ, ಅದ್ದು ಕುಂಜತ್ತೂರು, ಹಕೀಂ ಕುಂಜತ್ತೂರು, ವಿವಿಧ ಜಮಾಹತ್ ಸಮಿತಿಯ ಅಧ್ಯಕ್ಷರುಗಳು, ಖತೀಬುಗಳು ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಮಗ್ರಿಬ್ ನಮಾಜಿನ ಬಳಿಕ ಅಬೂಬಕ್ಕರ್ ಸಿದ್ದೀಖ್ ಅಝ್ ಹರಿ ಪಯ್ಯನ್ನೂರು ಇವರಿಂದ ಮುಖ್ಯ ಧಾರ್ಮಿಕ ಉಪನ್ಯಾಸ ನಡೆಯಿತು. ಬಳಿಕ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು.





