ಕೆ.ಸುರೇಂದ್ರನ್ ಜಾಮೀನು ಅಪೇಕ್ಷೆ ತೀರ್ಪು ಇಂದಿಗೆ ಮುಂದೂಡಿದ ನ್ಯಾಯಾಲಯ
0
ಡಿಸೆಂಬರ್ 06, 2018
ಕಾಸರಗೊಡು: ಶಬರಿಮಲೆ ಸನ್ನಿಧಾನದಲ್ಲಿ ಸ್ತ್ರೀಯರ ಪ್ರವೇಶವನ್ನು ತಡೆದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರ ಜಾಮೀನು ಅರ್ಜಿ ತೀರ್ಪುನ್ನು ಗುರುವಾರ ರಾಜ್ಯ ಉಚ್ಚ ನ್ಯಾಯಾಲಯವು ಇಂದಿಗೆ ಮುಂದೂಡಿದೆ. ಪರಮೋಚ್ಚ ನ್ಯಾಯಾಲಯದ ತೀರ್ಪನ್ನು ಕೆ.ಸುರೇಂದ್ರನ್ ನಿರ್ಲಕ್ಷಿಸಿರುವುದು ಮತ್ತು ಪ್ರತಿಭಟನೆಯ ದಿನದಂದು ಶಬರಿಮಲೆಗೆ ಯಾಕೆ ತೆರಳಬೇಕಾಯಿತೆಂದೂ ನ್ಯಾಯಾಲಯ ಪ್ರಶನಿಸಿದೆ.
ಪ್ರತಿ ವಾದಿಯಾಗಿರುವ ರಾಜ್ಯ ಸರಕಾರವು ಕೆ.ಸುರೇಂದ್ರನ್ ಅವರ ಜಾಮೀನು ಅಪೇಕ್ಷೆ ಬೇಡಿಕೆಯನ್ನು ಬಲವಾಗಿ ವಿರೋಧಿಸಿದೆ. ಕೆ.ಸುರೇಂದ್ರನ್ ಪರಮೋಚ್ಚ ನ್ಯಾಯಾಲಯದ ತೀರ್ಪಿಗೆ ಮಸಿ ಬಳಿಯಲು ಗುಪ್ತ ಕಾರ್ಯಸೂಚಿ ನಡೆಸಿರುವರು. ಶಬರಿಮಲೆ ಸಂದರ್ಶಿಸಲು ತಲಪಿದ ಸ್ತ್ರೀಯರನ್ನು ಆಕ್ರಮಿಸಿ ಅವಮಾನ ಮಾಡಿರುವರು ಎಂದು ರಾಜ್ಯ ಸರಕಾರ ವಾದಿಸಿದೆ.
ಈ ಸಂಬಂಧ ಕೆ.ಸುರೇಂದ್ರರನ್ನು ದಿಗ್ಬಂಧನಗೊಳಿಸಲು ಸರಕಾರವು ಅವರನ್ನು ಎಷ್ಟು ಕಾಲಾವಧಿಯ ವರೆಗೆ ಜೈಲಲ್ಲಿರಿಸಲು ಉದ್ದೇಶಿಸಿದೆ ಎಂದು ಪ್ರಶ್ನಿಸಿರುವ ರಾಜ್ಯ ಉಚ್ಚ ನ್ಯಾಯಾಲಯವು ರಾಜ್ಯದ ಹಲವು ಶಾಸಕರು, ಸಚಿವರ ಮೇಲೂ ಹಲವು ಆರೋಪಗಳಿದ್ದರೂ ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿದೆ. ಅಲ್ಲದೆ ಶಬರಿಮಲೆ ಘಟನೆಗೆ ಸಂಬಂಧಿಸಿ ಪ್ರತಿಭಟನೆ ನಡೆಸಿದ ತಂಡದಲ್ಲಿ ಕೆ.ಸುರೇಂದ್ರನ್ ಮಾತ್ರವೇ ಇದ್ದವರೋ ಎಂದೂ ನ್ಯಾಯಾಲಯ ಖಾರವಾಗಿ ಪ್ರಶ್ನಿಸಿದೆ. ಉಳಿದ ವಾದಗಳನ್ನೂ ಆಲಿಸಿ ಇಂದು ತೀರ್ಪು ನೀಡಲಾಗುವುದೆಂದು ಉಚ್ಚ ನ್ಯಾಯಾಲಯ ಗುರುವಾರ ತಿಳಿಸಿದೆ.





