HEALTH TIPS

ನಾಳೆಯಿಂದ ಕಾಸರಗೋಡು ಉಪಜಿಲ್ಲಾ ಶಾಲಾ ಕ್ರೀಡಾಕೂಟ- 135ಶಾಲೆಗಳ ಮೂರುವರೆ ಸಾವಿರಕ್ಕೂ ಹೆಚ್ಚು ಕ್ರೀಡಾಳುಗಳು ಭಾಗಿ

   
     ಕಾಸರಗೋಡು: ಉಪಜಿಲ್ಲಾ ಶಾಲಾ ಕ್ರೀಡೋತ್ಸವ ನಾಳೆಯಿಂದ(ಅಕ್ಟೋಬರ್ 22ರಿಂದ) 24ರ ವರೆಗೆ ನಾಯಮರ್‍ಮೂಲೆ ತನ್‍ಬೀಹುಲ್ ಇಸ್ಲಾಂ ಹಯರ್ ಸೆಕೆಂಡರಿ ಶಾಲೆಯ ಆತಿಥ್ಯದಲ್ಲಿ ಕಾಸರಗೊಡು ವಿದ್ಯಾನಗರದ ನಗರಸಭಾ ಸ್ಟೇಡಿಯಂನಲ್ಲಿ ಜರುಗಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಎಂ. ಅಬ್ದುಲ್ಲ ಹಾಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
     22ರಂದು ಬೆಳಿಗ್ಗೆ 9ಕ್ಕೆ ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾರ್ಡ್ ಧ್ವಜಾರೋಹಣ ನಡೆಸುವರು. 10ಕ್ಕೆ ಹೆಚ್ಚುವರಿ ಜಿಲ್ಲಾ ದಂಡನಾಧಿಕಾರಿ ಅಜೇಶ್ ಕ್ರೀಡಾಕೂಟ ಉದ್ಘಾಟಿಸುವರು. ಜಿಲ್ಲಾ ಶಿಕ್ಷಣಾಧಿಕಾರಿ ಕೆ. ನಂದಿಕೇಶನ್ ಪಥಸಂಚಲನದಲ್ಲಿ ಗೌರವವಂದನೆ ಸ್ವೀಕರಿಸರುವರು.
24ರಂದು ಸಆಯಂಕಾಳ 4ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಎನ್.ಎ ಅಬೂಬಕ್ಕರ್ ಹಾಜಿ ಉದ್ಘಾಟಿಸುವರು. ಶಾಲಾ ಪ್ರಬಂಧಕ ಅಬ್ದುಲ್ಲ ಹಾಜಿ ಬಹುಮಾನ ವಿತರಿಸುವರು. ಉಪಜಿಲ್ಲೆಯ 135ಶಾಲೆಗಳ3500ಮಂದಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು. ಮೂರು ದಿವಸಗಳ ಕಾಲ 5ಸಾವಿರಕ್ಕೂ ಹೆಚ್ಚುಮಂದಿಗೆ ಭೋಜನ ಸಹಿತ ಆಹಾರಪದಾರ್ಥವಿತರಿಸಲು ಅಗತ್ಯ ಕ್ರಮ ಕೈಗೊಮಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಮಹಮ್ಮದಾಲಿ ಮಾಸ್ಟರ್, ಮುಖ್ಯಶಿಕ್ಷಕಿ ಕುಸುಮ ಟೀಚರ್, ನಾರಾಯಣನ್ ನಂಬ್ಯಾರ್, ವಿನೋದ್‍ಕುಮಾರ್, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries