HEALTH TIPS

ತುಲಾ ಮಳೆ- ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

     ಕಾಸರಗೋಡು: ತುಲಾ ಮಾಸದ ಮಳೆ ಕೇರಳಾದ್ಯಂತ ಮುಂದಿನ ಐದು ದಿವಸಗಳ ಕಾಲ ಬಿರುಸಗೊಳ್ಳಲಿದ್ದು, ಜನರು ಜಾಗ್ರತೆ ಪಾಲಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅಕ್ಟೋಬರ್ 21ರಂದು ತಿರುವನಂತಪುರ, ಎರ್ನಾಕುಳಂ, ತೃಶ್ಯೂರ್, ಪಾಲಕ್ಕಾಡ್, ಮಲಪ್ಪುರಂ ವಯನಾಡ್ ಜಿಲ್ಲೆಗಳಲ್ಲಿ, 22ರಂದು ಕಾಸರಗೋಡು, ಕಣ್ಣೂರು, ಮಲಪ್ಪುರಂ, ಪಾಲಕ್ಕಾಡ್ ಹಾಗೂ ಇಡುಕ್ಕಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
     ಆರೆಂಜ್ ಅಲರ್ಟ್ ಘೋಷಿಸಿರುವ ಜಿಲ್ಲೆಗಳಲ್ಲಿ 115ರಿಂದ 204 ಮಿ.ಮೀ ವರೆಗೂ ಮಳೆಯಾಗುವ ಸಾಧ್ಯತೆಯಿದೆ. ಈ ಸಂದರ್ಭ ಭಾರಿ ಭೂಕುಸಿತಕ್ಕೂ ಸಾಧ್ಯತೆಯಿದ್ದು,  ಮಲೆನಾಡು ಪ್ರದೇಶದ ಜನರು ಹಾಗೂ ಹೊಳೆ ದಡದಲ್ಲಿ ವಾಸಿಸುವವರು ಜಾಗ್ರತೆ ಪಾಲಿಸಬೇಕು. ತುಲಾವರ್ಷದಲ್ಲಿ  ಮಿಂಚು ಹಾಗೂ ಸಿಡಿಲು ಒಳಗೊಂಡ ಬಿರುಸಿನ ಮಳೆಯಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries