ಕಾಸರಗೋಡು: ಕೇರಳದ ಮಂಜೇಶ್ವರ ಸಹಿತ ಐದು ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಉಪ ಚುನಾವಣೆ ನಡೆಯಲಿದ್ದು, ಅ. 24ರಂದು ಮತ ಎಣಿಕೆ ನಡೆಯಲಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ 198ಮತಗಟ್ಟೆಗಳಲ್ಲಿ ಒಟ್ಟು 214779 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ 106928 ಮಹಿಳೆಯರು, 107851ಮಂದಿ ಪುರುಷರು, 1240 ವಿಶೇಷಚೇತನರು ಇದ್ದಾರೆ. ಒಟ್ಟು 98 ಮತಗಟ್ಟೆಗಳಿವೆ. ಈಗಾಗಲೇ ಸೂಕ್ಷ್ಮ ಸಂವೇದಿ ಮತಗಟ್ಟೆಗಳನ್ನು ಗುರುತಿಸಿ, ಇಲ್ಲಿ ಬಿಗು ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಇದೇ ಮೊದಲಬಾರಿಗೆ ಬುರ್ಖಾಧಾರಿ ಮಹಿಳೆಯರ ತಪಾಸಣೆಗೆ ಎಲ್ಲ 198ಮತಗಟ್ಟೆಗಳಲ್ಲಿ ಪ್ರತ್ಯೇಕ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಎಲ್ಲ ಬೂತ್‍ಗಳಲ್ಲಿಯೂ ವಿಡಿಯೋ ಚಿತ್ರೀಕರಣ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.
1957ರ ಚುನಾವಣೆಯಲ್ಲಿ ಕನ್ನಡಿಗರ ಪ್ರತಿನಿಧಿ ಎಂ.ಉಮೇಶ್ ರಾವ್ ಅವಿರೋಧವಾಗಿ ಗೆಲವುಸಾದಿಸುವಮೂಲಕ ಇಲ್ಲಿನ ಇತಿಹಾಸಕ್ಕೆ ಹೊಸನಾಂದಿಯನ್ನು ಹಾಡಿದ್ದರು. 1960ರಲ್ಲಿ ಕನ್ನಡಿಗರ ಹಿರಿಯ ನಾಯಕ, ಮಹಾಚೇತನಕಳ್ಳಿಗೆ ಮಹಾಬಲ ಭಂಡಾರಿ ಗೆಲುವು ಸಧಿಸಿದ್ದರು. 1965ರಲ್ಲಿ ಹಾಗೂ 1967ರಲ್ಲಿ ವಿಜಯ ಪತಾಕೆ ಹಾರಿಸಿದರು. 1970 ಮತ್ತು 1977ರಲ್ಲಿ ಸಿ.ಪಿ.ಐಯ ಅರ್ಭಯರ್ಥಿಎಂ.ರಾಮಪ್ಪ ವಿಜೇತರಾಗಿದ್ದರು. 1980 ಮತ್ತು 1982ರಲ್ಲಿ ಸಿ.ಪಿ.ಐಯ ಡಾ.ಎ.ಸುಬ್ಬರಾವ್ ವಿಜೇತರಾಗಿ ಸಚಿವಸ್ಥಾನವನ್ನೂ ಗಿಟ್ಟಿಸಿದ್ದರು. 1987, 1991, 1996, 2001ರಲ್ಲಿಮುಸ್ಲಿಂಲೀಗಿನ ಚೆರ್ಕಳಂ ಅಬ್ದುಲ್ಲ ಅವರು ಸರಣಿ ಗೆಲುವು ದಾಖಲಿಸಿದ್ದರು. 2006ರಲ್ಲಿ ಸಿ.ಪಿ.ಎಂ.ನ ಸಿ.ಎಚ್.ಕುಂಞಂಬು ಗೆಲುವು ಸಾಧಿಸಿದ್ದರೆ, 2011 ಮತ್ತು 2016ರಲ್ಲಿ ಮುಸ್ಲಿಂಲೀಗಿನ ಪಿ.ಬಿ.ಅಬ್ದುಲ್ ರಜಾಕ್ ವಿಜೇತರಾಗಿದ್ದರು.
ಪಿ.ಬಿ ಅಬ್ದುಲ್ ರಜಾಕ್ ಅವರ ನಿಧನದ ಹಿನ್ನೆಲೆಯಲ್ಲಿ ಇಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಗೆಲುವು ಸಾಧಿಸುವ ಅಭ್ಯರ್ಥಿಗಳು ಒಂದುವರೆ ವರ್ಷದ ವರೆಗೆ ಶಾಸಕರಾಗಿದ್ದು, ಮತ್ತೆ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆಯಿದೆ.
ಎರ್ನಾಕುಳಂ, ವಟ್ಟಿಯೂರ್‍ಕಾವು, ಅರೂರ್ ಹಾಗೂ ಕೋನ್ನಿ ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ.