ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು ಅಂತಿಮ ಹಂತದಲ್ಲಿದೆ. ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲುದ್ದೇಶಿಸಿದ ಭೋಜನ ಶಾಲೆಗೆ ಅ.26ರಂದು ಶನಿವಾರ `ಶಿಲಾನ್ಯಾಸ' ನಡೆಯಲಿರುವುದು. ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿರುವುದು. ಬೆಳಿಗ್ಗೆ 10 ಗಂಟೆಗೆ ಭೂಮಿಪೂಜೆ, ಶಿಲಾನ್ಯಾಸ, ಸಭಾಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಪ್ರಸಾದ ಜರಗಲಿರುವುದು. ಗಣ್ಯರು ಹಾಗೂ ಅತಿಥಿಗಳು ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಊರಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ವತಿಯಿಂದ ತಿಳಿಸಲಾಗಿದೆ.
ಅ.26ಕ್ಕೆ ಗೋಸಾಡ ದೇವಸ್ಥಾನದಲ್ಲಿ ಭೋಜನ ಶಾಲೆಗೆ ಶಿಲಾನ್ಯಾಸ
0
ಅಕ್ಟೋಬರ್ 23, 2019