ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ಶಾಲಾ ಲಿಟಲ್ ಕೈಟ್ಸ್ ವತಿಯಿಂದ ಪೋಷಕರ ಸಬಲೀಕರಣ ಯೋಜನೆಯ ಅಂಗವಾಗಿ ಐಟಿ ಆಧಾರಿತ ತರಬೇತಿ ಕಾರ್ಯಕ್ರಮ ನಡೆಯಿತು.
ಶಾಲಾ ವಿದ್ಯಾರ್ಥಿಗಳ ಮಾತೆಯರಿಗಾಗಿ ನಡೆದ ಮಾಹಿತಿ ತಂತ್ರಜ್ಞಾನದ ಕುರಿತಾ ಏಕದಿನ ತರಬೇತಿ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್ ಉದ್ಘಾಟಿಸಿದರು. ಮಾಹಿತಿ ತಂತ್ರಜ್ಞಾನ ಮಕ್ಕಳ ಜೀವನದಲ್ಲಿ ಹಾಗೂ ಕಲಿಕೆಯಲ್ಲಿ ಯಾವೆಲ್ಲ ರೀತಿಯಲ್ಲಿ ಪ್ರಭಾವ ಬೀರುತ್ತದೆ ಹಾಗೂ ಈ ಮೂಲಕ ಮಾತೆಯಂದಿರಿಗೆ ಮಕ್ಕಳ ಕಲಿಕೆ ಹಾಗೂ ಜೀವನ ಉತ್ತಮಗೊಳಿಸಲು ಹೇಗೆ ಸಾಧ್ಯ ಎಂಬುದರ ಕುರಿತು ಐಟಿ ಸಂಯೋಜಕ ಶಶಿಕುಮಾರ್ ಪೆರ್ಣೆ ತರಬೇತಿ ನೀಡಿದರು. ಶಿಕ್ಷಕ ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ಲಿಟಲ್ ಕೈಟ್ಸ್‍ನ ತರಬೇತುದಾರ ಹಾಗೂ ಐಟಿ ಸಹಸಂಯೋಜಕ ಪ್ರದೀಪ ಕರ್ವಾಜೆ ಹಾಗೂ ಸೌಮ್ಯ ಟೀಚರ್ ಕಾರ್ಯಕ್ರಮ ನಿರೂಪಿಸಿದರು, ಅಧ್ಯಾಪಕರಾದ ಪ್ರಶಾಂತ ಹೊಳ್ಳ ಎನ್., ರಾಜಕುಮಾರ್, ಲತಾ ಎಂ. ಸಹಕರಿಸಿದರು.


