ಮಂಜೇಶ್ವರ: ಕೊಡ್ಲಮೊಗರು ಹೈಸ್ಕೂಲ್‍ನಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಕರಕುಶಲ ವಸ್ತು ಮೇಳದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾತೂರು ಸಂಗ್ರಹ ವಿಭಾಗದಲ್ಲಿ ಮಕ್ಕಳು ಹಳೆಯ ವಸ್ತುಗಳ ಸಂಗ್ರಹ ಮಾಡಿ ದ್ವಿತೀಯ ಬಹುಮಾನ ಪಡೆದು ಶಾಲೆಯ ಅಭಿನಂದನೆಗೆ ಪಾತ್ರರಾಗಿದ್ದಾರೆ. ಈ ಮಕ್ಕಳನ್ನು ಅಭಿನಂದಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಪದ್ಮನಾಭ ಮಾಸ್ತರ್ ಇಂತಹ ಹವ್ಯಾಸ ನಮ್ಮನ್ನು ಇತಿಹಾಸ, ಪರಂಪರೆಯತ್ತ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಉತ್ತಮ ಹವ್ಯಾಸ ಉತ್ತಮ ಜೀವನ ನಡೆಸುವ ಸಾಮಥ್ರ್ಯ ಬೆಳೆಸುತ್ತದೆ ಎಂದು ಹಿರಿಯ ಅಧ್ಯಾಪಕರಾದ ಉಸ್ಮಾನ್ ಮಾಸ್ತರ್ ಹೇಳಿದರು. ಎಳೆವೆಯಲ್ಲೆ ಸಂಗ್ರಹಿಸುವ ಉಳಿಸುವ ಬೆಳೆಸುವ ಗುಣ ಬೆಳೆಸಬೇಕೆಂದು ಅಧ್ಯಾಪಕರಾದ ಜಯಂತ ಮಾಸ್ತರ್ ಸಲಹೆ ನೀಡಿದರು. ಮಕ್ಕಳು ಹಳೆಯ ವಸ್ತುಗಳ ಸಂಗ್ರಹ ಮಾಡಲು ಸಹಕರಿಸಿದ ಗಿರಿಜಾ ಟೀಚರ್, ಜೈನಬ ಟೀಚರ್, ಸುಂದರ, ಜಲಜಾಕ್ಷಿ ಟೀಚರ್, ಸರಸ್ವತಿ ಉಪಸ್ಥಿತರಿದ್ದರು.


