HEALTH TIPS

ಪುಳ್ಕೂರು ಕ್ಷೇತ್ರದಲ್ಲಿ ನವಾನ್ನ ಸಮರ್ಪಣೆ ಸಂಪನ್ನ


    ಮಧೂರು:  ಪುಳ್ಕೂರು ಶ್ರೀ ಮಹಾದೇವ ಕ್ಷೇತ್ರದಲ್ಲಿ ನವಾನ್ನ ಸಮರ್ಪಣೆ ಮತ್ತು ದೇವಸ್ಥಾನ ತುಂಬಿಸುವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.
        ಪ್ರಾತ:ಕಾಲ ಉಷ: ಪೂಜೆ ಕಳೆದು ಗಣಪತಿ ಹೋಮ ನಡೆಯಿತು. ನಂತರ ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಭಾಕರ ಕಾರಂತ, ಸೂರ್ಯನಾರಾಯಣ ಕಾರಂತ, ಸತೀಶ ಕಾರಂತ ಅವರ ಕಾರ್ಮಿಕತ್ವದಲ್ಲಿ ದೇವಸ್ಥಾನ ತುಂಬಿಸುವ ಕಾರ್ಯಕ್ರಮ ಜರಗಿತು. ಆ ಬಳಿಕ ಊರಿನ ಎಲ್ಲಾ ಮನೆಗಳಿಗೂ ಹಾಗು ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೂ ತೆನೆ ವಿತರಿಸಲಾಯಿತು. ಮಧ್ಯಾಹ್ನ ಪೂಜೆ ಬಳಿಕ ಸಾಮೂಹಿಕ ಭೋಜನ ನಡೆಯಿತು.
          ಅ.28 ರಂದು ಕಾರ್ತಿಕ ಮಾಸ ದೀಪೆÇೀತ್ಸವ ಪ್ರಾರಂಭವಾಗಿ ನ.27 ರ ವರೆಗೆ ರಾತ್ರಿ ವಿಶೇಷ ಕಾರ್ತಿಕ ಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ತಿಂಗಳ ಕಾಲ ಪ್ರತಿದಿನವೂ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗು ಪದಾ„ಕಾರಿಗಳು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries