ಕಾಸರಗೋಡು: ಗ್ಯಾಸ್ ಟ್ಯಾಂಕರ್ ಮಗುಚಿ ಅನಿಲ ಸೋರಿಕೆ ನಡೆದ ಪ್ರಕರಣದಲ್ಲಿ ಜೀವನ್ಮರಣ ಹೋರಾಟದೊಂದಿಗೆ ರಕ್ಷಣೆ ಕಾರ್ಯ ನಡೆಸಿದ ಅಗ್ನಿಶಾಮಕದಳದ ಸದಸ್ಯರಿಗೆ ಜಿಲ್ಲಾಡಳಿತೆ ವತಿಯಿಂದ ಅಭಿನಂದನೆ ನಡೆಯಿತು.
ನಗರದ ಕರಂದೆಕ್ಕಾಡಿನ ಅಗ್ನಿಶಾಮಕದಳ ಕೇಂದ್ರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಅಭಿನಂದನೆ ನಡೆಸಿದರು. ದಳದ ಪ್ರತಿನಿಧಿಯಾಗಿ ಅಗ್ನಿಶಾಮಕ ವಾಹನ ಚಾಲಕ ಇ.ಪ್ರಸೀತ್ ಅವರು ಅಭಿನಂದನೆ ಸ್ವೀಕರಿಸಿದರು.
ಜಿಲ್ಲಾ ದಳದ ಅಧಿಕಾರಿ ಬಿ.ರಾಜನ್ ಅವರ ನೇತೃತ್ವದಲ್ಲಿ ಕಾಸರಗೋಡು, ಕಾಞÂ್ಞ ಂಗಾಡ್, ಉಪ್ಪಳ ಪ್ರದೇಶಗಳ ದಳದ ಸಿಬ್ಬಂದಿ ಅಹೋರಾತ್ರಿ ನಡೆಸಿದ ಕಾರ್ಯಾಚರಣೆಯ ಫಲವಾಗಿ ಭಾರೀ ಅಪಾಯ ತಪ್ಪಿಹೋಗಿತ್ತು. ಸ್ಟೇಷನ್ ಅಧಿಕಾರಿಗಳಾದ ಕೆ.ಅರುಣ್,ಪ್ರಕಾಶ್ ಕುಮಾರ್, ಎ.ಸಿ.ಜಾರ್ಜ್, ಲೀಡಿಂಗ್ ಫೈರ್ ಮ್ಯಾನ್ ಗಳಾದ ಕೆ.ವಿ.ಮೋಹನನ್, ಕೆ.ಸತೀಶ್, ಸಹದೇವನ್, ಚಾಲಕರಾದ ಇ.ಪ್ರಸೀತ್, ಶ್ಯಾಂಜಿತ್ ಕುಮಾರ್, ರಾಯ್ ಮ್ಯಾಥ್ಯೂ, ಅನೂಪ್, ಅತೀಷ್, ರಾಜನ್ ತೈವಳಪ್, ಡ್ರೈವರ್ ಮೆಕ್ಯಾನಿಕ್ ಅಶೋಕನ್ಪಿಳ್ಳೆ, ಫೈರ್ ಮ್ಯಾನ್ ಗಳು, ಹೋಗಾರ್ಡ್ ಗಳು ಮೊದಲಾದವರು ರಕ್ಷಣಾ ಕಾರ್ಯಕ್ಕೆ ಹೆಗಲು ನೀಡಿದ್ದರು.