HEALTH TIPS

"ಸಮ" ಯೋಜನೆ ಸಂಬಂಧ ಕಾರ್ಯಾಗಾರ

                 
     ಕಾಸರಗೋಡು:  ರಾಜ್ಯ ಸಾಕ್ಷರತಾ ಮಿಷನ್ ಮತ್ತು ಕುಟುಂಬಶ್ರೀ ಮಿಷನ್ ತತ್ಸಮಾನ ಪರೀಕ್ಷೆಗಳಿಗೆ ಹೆಗಲು ನೀಡಲಿವೆ. ಈ ನಿಟ್ಟಿನಲ್ಲಿ ಕುಟುಂಬಶ್ರೀ ಕಾರ್ಯಕರ್ತರಿಗೆ ಹತ್ತನೇ ತರಗತಿ ತತ್ಸಮಾನ, 12ನೇ ತರಗತಿ ತತ್ಸಮಾನ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ನೂತನ ಯೋಜನೆ ಆರಂಭಿಸಲಾಗುವುದು.  ಈ ಯೋಜನೆಗೆ "ಸಮ" ಎಂದು ಹೆಸರಿಡಲಾಗಿದೆ.
     ಈ ಯೋಜನೆಯ ಜಾರಿ ಸಂಬಂಧ ಕಾರ್ಯಾಗಾರ ಗುರುವಾರ ಜಿಲ್ಲಾ ಪಂಚಾಯತ್ ಸಮಿತಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕುಟುಂಬಶ್ರೀ ಮಿಷನ್ ಸಂಚಾಲಕ ಟಿ.ಟಿ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷರತಾ ಮಿಷನ್ ಜಿಲ್ಲಾಸಂಚಾಲಕ ಷಾಜಿ ಜಾನ್  ಯೋಜನೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಕುಟುಂಬಶ್ರೀ ಸಹಾಯಕ ಜಿಲ್ಲಾ ಸಂಚಾಲಕರಾದ ಎಂ.ಹರಿದಾಸ್,ಪ್ರಕಾಶನ್ ಪಾಲಾಯಿ, ಜೋಸೆಫ್, ಸಾಕ್ಷರತಾ ಮಿಷನ್ ರಾಜ್ಯ ಸಮಿತಿ ಸದಸ್ಯ ರಾಜನ್ ಪೊಯಿನಾಚಿ,ಸಾಕ್ಷರತಾ ಮಿಷನ್ ಜಿಲ್ಲಾ ಸಹಾಯಕ ಸಂಚಾಲಕ ವಿ.ಎನ್.ಬಾಬು , ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ.ರಾಘವನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಯೋಜನೆ ಅಧಿಕಾರಿ ಸತ್ಯ ಪ್ರಕಾಶ್ ಎಸ್. ಯೋಜನೆಯ ರೂಪುರೇಷೆ ಪ್ರಸ್ತುತಪಡಿಸಿದರು.
       "ಸಮ" ಯೋಜನೆ ಜಿಲ್ಲೆಯ ಎಲ್ಲ ಪಂಚಾಯತ್ ಗಳಲ್ಲಿ, ನಗರಸಭೆಗಳಲ್ಲಿ ಜಾರಿಗೊಳಿಸಲಾಗುವುದು. 5 ಸಾವಿರ ಮಂದಿಯನ್ನು ಈ ಯೋಜನೆಯಲ್ಲಿ ಅಳವಡಿಸಲಾಗುವುದು. ಹತ್ತನೇ ಮತ್ತು 12ನೇ ತತ್ಸಮಾನ ಪರೀಕ್ಷೆ ಬರೆಯುವ ಯೋಜನೆ ಜ.1ರಂದು ಆರಂಭಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries