ಬದಿಯಡ್ಕ: ಪಾಂಡಿ ಸರ್ಕಾರಿ ಹೈಸ್ಕೂಲಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಬದಿಯಡ್ಕದ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯು ಸತತ ಮೂರನೇ ಬಾರಿಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿದೆ.
544 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಗಳಿಸಿದ ಪ್ರಯುಕ್ತ ಶನಿವಾರ ಬದಿಯಡ್ಕ ಪೇಟೆಯಲ್ಲಿ, ಬಾಂಡ್ ವಾದ್ಯಗಳೊಂದಿಗೆ ವಿಜಯೋತ್ಸವವನ್ನು ಆಚರಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಡಿ.ಶಂಕರ, ಮಾತೃಸಂಘದ ಉಪಾಧ್ಯಕ್ಷೆ ಸುರೇಖ, ಮುಖ್ಯೋಪಾಧ್ಯಾಯಿನಿ ತಂಗಮಣಿ, ಅಧ್ಯಾಪಕರುಗಳಾದ ವತ್ಸಲ ಕೆ., ಬಿಂದು, ಶ್ರೀಜ, ರಮ್ಯಾ, ವಿದ್ಯಾ ಸಿ.ಯಚ್., ಜ್ಯೋತ್ಸ್ನಾ ಎಮ್., ನಿರಂಜನ್ ರೈ, ನಾರಾಯಣ ಆಸ್ರ, ರಾಜೇಶ್ ಅಗಲ್ಪಾಡಿ, ದಿವೀಶ್, ರಾಜೀವ್, ಸೋಮನಾಥ, ಬಾಲಕೃಷ್ಣ, ಸಂದೀಪ್ ಹಾಗೂ ಯಜ್ಞೇಶ್, ಗೋಪಾಲ ಮತ್ತಿತರರು ನೇತೃತ್ವ ವಹಿಸಿದರು. ವಿಜ್ಞಾನೋತ್ಸವದಲ್ಲಿ ಪಾಲ್ಗೊಂಡ ಸ್ಪರ್ಧಾಳುಗಳು, ಎಸ್.ಪಿ.ಸಿ., ಎನ್.ಎಸ್.ಎಸ್, ರೆಡ್‍ಕ್ರೋಸ್, ಸ್ಪೋಟ್ರ್ಸ್ ಗೈಂಡೆನ್ಸ್ ಮಕ್ಕಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ವ್ಯವಸ್ಥಾಪಕ ಮಂಡಳಿ, ರಕ್ಷಕ ಶಿಕ್ಷಕ ಸಂಘ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.


