ಮಂಜೇಶ್ವರ: ಉಪ ಚುನಾವಣಾ ಪ್ರಕ್ರಿಯೆಗಳು ಕೊನೆಗೊಳ್ಳುತ್ತಿರುವಂತೆ ಎಲ್ಲರ ಕುತೂಹಲ ಮತದಾನದ ಶೇಕಡಾವಾರಿನತ್ತ ನೆಟ್ಟಿದ್ದು, ಮಂಜೇಶ್ವರ ವಿಧಾನ ಸಭಾ ವ್ಯಾಪ್ತಿಯಲ್ಲಿ 76.25 ಶೇ.ಮತದಾನ ನಡೆದಿದೆ. ಮಿಕ್ಕುಳಿದಂತೆ ಸೋಮವಾರ ಮತದಾನ ನಡೆದಿದ್ದ ತೀವ್ರ ಮಳೆಯ ಮಧ್ಯೆಯೂ ಎರ್ನಾಕುಳಂ ಕ್ಷೇತ್ರದಲ್ಲಿ 57.86 ಶೇ. ಮತ ಚಲಾವಣೆಯಾಗಿರುವುದಾಗಿ ತಿಳಿದುಬಂದಿದೆ. ಅರೂರಲ್ಲಿ ಶೇ.80.47, ಕೊನ್ನಿಯಲ್ಲಿ 70.10 ಶೇ ಹಾಗೂ ವೆಟ್ಟಿಯೂರ್ ಕಾವಿಲ್ ಕ್ಷೇತ್ರದಲ್ಲಿ 62.66 ಶೇ. ಮತಗಳು ಚಲಾವಣೆಗೊಂಡಿರುವುದಾಗಿ ತಿಳಿದುಬಂದಿದೆ.
ಬಾಳೆಮೂಲೆಯಲ್ಲಿ ಕಿರಿಕಿರಿ:
ಗಡಿ ಗ್ರಾಮ ಎಣ್ಮಕಜೆ ಗ್ರಾ.ಪಂ. ಬಾಳೆಮೂಲೆ ಮತಗಟ್ಟೆಯಲ್ಲಿ ಉಪ ಚುನಾವಣಾ ಹಿನ್ನೆಲೆಯಲ್ಲಿ ಸಂಜೆ ವ್ಯಾಪಕ ಪ್ರಮಾಣದ ಗೊಂದಲಗಳೇರ್ಪಟ್ಟ ಬಗ್ಗೆ ವರದಿಯಾಗಿದೆ. ಪಕ್ಷವೊಂದು ತಮ್ಮದ ಮತದಾರರಿಗೆ ಪಡಿತರ ಚೀಟಿಯನ್ನು ಬಳಸಿ ಮತ ಚಲಾಯಿಸುವಂತೆ ಮತಗಟ್ಟೆ ಅಧಿಕಾರಿಯನ್ನು ಬೆದರಿಸಿರುವುದು ವರದಿಯಾಗಿದೆ. ಬಳಿಕ ಭಾರೀ ಮಾತಿನ ಚಕಮಕಿಯ ಬಳಿಕ ಹಲವರು ಪಡಿತರ ಚೀಟಿ ಬಳಸಿ ಮತಚಲಾಯಿಸಿದ್ದಾರೆ. ಬಳಿಕ ಮತಗಟ್ಟೆ ಅಧಿಕಾರಿಯಲ್ಲಿ ಮತದಾನ ಪ್ರಕ್ರಿಯೆ ಕೊನೆಗೊಂಡ ಬಳಿಕ ಮತಗಟ್ಟೆಯ ಪೀಠೋಕರಣಗಳನ್ನು ತಮದಲ್ಲಿಗೆ ಕೊಂಡೊಯ್ಯುವಂತೆ ಬೆದರಿಸಿರುವುದಾಗಿ ತಿಳಿದುಬಂದಿದೆ.

