ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆದಿದೆ. ಸುಧಾರಿತ ಮತ್ತು ಪಾರದರ್ಶಕ ಮತದಾನ ನಡೆಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗದ ಆದೇಶ ಪ್ರಕಾರ ಜಿಲ್ಲಾಡಳಿತೆ ಎಲ್ಲ ಸಿದ್ಧತೆ ನಡೆಸಿತ್ತು.
ಒಟ್ಟು 198 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಚುನಾವಣೆ ಅಂಗವಾಗಿ 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ, 49 ಮತಗಟ್ಟೆಗಳಲ್ಲಿ ಅರೆಸೇನ ಪಡೆ ನಿಯೋಜಿಸಲಾಗಿತ್ತು. 105 ಮತಗಟ್ಟೆಗಳನನು ಸೂಕ್ಷ್ಮ ಮತಗಟ್ಟೆಗಳಾಗಿಪರಿಶೀಲಿಸಲಾಗಿದ್ದು, ನಿಗಾ ಇರಿಸಲಾಗಿತ್ತು. 53 ಮತಗ್ಟೆಗಳಲ್ಲಿ ಮೈಕ್ರೋ ನಿರೀಕ್ಷಕರು ಕರ್ತವ್ಯದಲ್ಲಿದ್ದರು. ಬುರ್ಖಾ ಧಾರಿಗಳ ಗುರುತಿಗೆ 198 ಮಹಿಳ ಸಿಬ್ಬಂದಿಯ ನೇಮಕಾತಿ ನಡೆದಿತ್ತು.
ದಕ್ಷತೆಯ ಚಟುವಟಿಕೆ ನಡೆಸಲು ಚುನಾವಣೆ ಆಯೋಗಕ್ಕೆ ಮತ್ತು ಜಿಲ್ಲೆಯ ಸಿಬ್ಬಂದಿಗೆ ಸಾಧ್ಯವಾಗಿತ್ತು. ರಾಜಕೀಯ ಪಕ್ಷಗಳ ಬೆಂಬಲವೂ ಈ ನಿಟ್ಟಿನಲ್ಲಿ ಗಮನಾರ್ಹವಾಗಿತ್ತು. ಹೆಚ್ಚಿನ ಲೋಪದೋಷಗಳಿಲ್ಲದೆ ಚುನಾವಣೆ ನಡೆಸಲು ಈಕಾರಣಗಳಿಂದ ಸಾಧ್ಯವಾಯಿತು.
ಮುಂಜಾನೆಯಿಂದಲೇ ಬಹುತೇಕ ಮತಗಟ್ಟೆಗಳಲ್ಲಿ ಮತದಾತರ ಸಾಲು ಕಂಡುಬಂದಿತ್ತು. ಕೆಲವು ಮತಗಟ್ಟೆಗಳಲ್ಲಿ ಮತದಾನದ ಅಂತಿಮ ಹಂತದಲ್ಲೂ ಮತದಾತರ ಸಾಲು ಕಂಡುಬಂದಿತ್ತು. ಮಲೆನಾಡ ಪ್ರದೇಶಗಳಲ್ಲಿ ಕೆಲವೆಡೆ ಮತದಾತರ ಸಂಖ್ಯೆ ಕಡಿಮೆಯಿತ್ತು.
ವಯೋವೃದ್ಧರನ್ನು, ರೋಗಿಗಳನ್ನು ಮತದಾನಕ್ಕೆ ಆಂಬುಲೆನ್ಸ್ ಸಹಿತ ವಾಹನಗಳಲ್ಲಿ ಕರೆತರಲಾಯಿತು. ಈ ಮೂಲಕ ಕ್ಷೇತ್ರದ ಮತದಾನದ ಸಂಖ್ಯೆ ಹೆಚ್ಚಿಸಲು ಸಾಧ್ಯವಾಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಚುನಾವನೆಗಾಗಿ ಭಾರೀ ಸಿದ್ಧತೆ ನಡೆಸಲಾಗಿತ್ತು.
ಎರಡು ಬಸ್ ಗಳು ವಶಕ್ಕೆ:
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆದ ಉಪಚುನಾವಣೆಯಲ್ಲಿ ಅಕ್ರಮ ಮತದಾನ ನಡೆಸುವ ಉದ್ದೇಶದಿಂದ ಜನರನ್ನು ಕರೆತಂದ ಆರೋಪದಲ್ಲಿ ಕರ್ನಾಟಕ ನೋಂದಣಿ ಹೊಂದಿರುವ ಎರಡು ಬಸ್ ಗಳನ್ನು ಉಪ್ಪಳದಲ್ಲಿ ಪ್ಲೈಯಿಂಗ್ ಸ್ಕ್ವಾಡ್ ವಶಪಡಿಸಿದೆ. ನೂರಾರು ಮಂದಿ ಈ ಎರಡೂ ಬಸ್ ಗಳಲ್ಲಿ ಇದ್ದರು ಎಂದು ದಳದ ಅಧಿಕಾರಿಗಳು ತಿಳಿಸಿರುವರು. ಚುನಾವಣೆಯ ಖರ್ಚುವೆಚ್ಚ ನಿರೀಕ್ಷಕ ಕಮಲ್ ಜೀತ್ ಕೆ.ಕಮಲ್ ಅವರ ಆದೇಶ ಪ್ರಕಾರ ಈ ವಾಹನಗಳನ್ನು ವಶಪಡಿಸಲಾಗಿದೆ.

