HEALTH TIPS

ಗಡಿನಾಡ ಕನ್ನಡಿಗನಿಗೆ ಕರ್ನಾಟಕ ರಾಜ್ಯ ಯುವ ಇಂಜಿನಿಯರ್ ಪ್ರಶಸ್ತಿ

    ಮುಳ್ಳೇರಿಯ: 2018ನೇ ಸಾಲಿನ ಕರ್ನಾಟಕ ಪ್ರೊ.ಸತೀಶ್ ಧವನ್ ಯುವ ಇಂಜಿನಿಯರ್ ರಾಜ್ಯ ಪ್ರಶಸ್ತಿಯು ಗಡಿನಾಡ ಕನ್ನಡಿಗ ಚೆಂಗಳ ನಿವಾಸಿ ಡಾ.ಸಿ.ಡಿ.ಮಧುಸೂದನ ಬಲ್ಲಾಳ್ ಅವರಿಗೆಚ ಲಭಿಸಿದೆ. ಶುದ್ದ ಶಕ್ತಿ ಉತ್ಪಾದನೆ ಮತ್ತು ಪರಿಸರ ಸಂರಕ್ಷಣೆಗೆ ಅಗತ್ಯವಾದ ನೂತನ ಸಿರಾಮಿಕ್ ಉತ್ಪನ್ನದ ಬಗ್ಗೆ ಅಧ್ಯಯನ ನಡೆಸಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಬಲ್ಲಾಳ್ ಆಯ್ಕೆಯಾಗಿರುವರು.
     ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಪ್ರಶಸ್ತಿ ಪ್ರದಾನಗೈದರು. ನಿವೃತ್ತ ಮುಖ್ಯೋಪಾಧ್ಯಾಯ ಕಾರಡ್ಕ ಬೀಡು ದಾಮೋದರ ಬಲ್ಲಾಳರ ಸುಪುತ್ರರಾಗಿರುವ ಮಧುಸೂದನ ಬಲ್ಲಾಳ್ ಮುಳ್ಳೇರಿಯ, ಎಡನೀರುಸ್ವಾಮೀಜೀಸ್ ಶಾಲೆ, ಕಾಸರಗೋಡು ಸರ್ಕಾರಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಇವರು ಬೆಂಗಳೂರಿನ ಬಿಎಚ್‍ಇಎಲ್ ನ ಸಿರಾಮಿಕ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ನಲ್ಲಿ ಹೆಚ್ಚುವರಿ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಜಪಾನ್ ನಿಂದ ಡಾಕ್ಟರೇಟ್ ಪಡೆದಿರುವರು. ಬೆಂಗಳೂರಲ್ಲಿ ನೆಲಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries