ಬದಿಯಡ್ಕ: ಕಾಸರಗೋಡು ಜಿಲ್ಲಾ ಮಟ್ಟದ ಗಣಿತ ವಿಜ್ಞಾನೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ನಂಬರ್ ಚಾರ್ಟ್ ಸ್ಪರ್ಧೆಯಲ್ಲಿ ಫಿದಾ ಫಾತಿಮ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾದ ಈಕೆ ಪತ್ರಕರ್ತ, ಅಧ್ಯಾಪಕ ಹಸನ್ ಬದಿಯಡ್ಕ ಹಾಗೂ ಅನ್ನತ್ ದಂಪತಿಗಳ ಪುತ್ರಿ.