HEALTH TIPS

ಸವಾಕ್ ವಾರ್ಷಿಕ ಮಹಾಸಭೆ

 
     ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ಸ್ ಆ್ಯಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ ರಾಜ್ಯ(ಸವಾಕ್) ಇದರ ಕಾಸರಗೋಡು ವಲಯದ ವಾರ್ಷಿಕ ಮಹಾಸಭೆ ಸವಾಕ್ ಜಿಲ್ಲಾ ಕಚೇರಿಯಲ್ಲಿ ಜರಗಿತು.
      ಕಾರ್ಯಕ್ರಮದಲ್ಲಿ ಕಾಸರಗೋಡು ವಲಯದ ಅಧ್ಯಕ್ಷರಾದ ದಯಾ ಪ್ರಸಾದ್ ಪಿಲಿಕುಂಜೆ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷರಾದ ಉಮೇಶ್ ಎಂ.ಸಾಲಿಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿ ಕಾಸರಗೋಡು ಜನರಲ್ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ|ವಸಂತಿ ಅವರು ಕಲಾವಿದರ ಸಾಧನೆ ಅಪೂರ್ವವಾದುದು. ನಾನು ಸಂಗೀತ ಮತ್ತು ಸಾಹಿತ್ಯವನ್ನು ತುಂಬಾ ಇಷ್ಟಪಡುತ್ತೇನೆ. ಕಲಾವಿದರು ಸಮಾಜಕ್ಕೆ ನೀಡುವ ಕೊಡುಗೆಯನ್ನು ಅಭಿನಂದಿಸುತ್ತೇನೆ. ಸವಾಕ್‍ನ ಮಹಿಳಾ ಕಲಾವಿದರಿಗೆ ಯಾವ ಸಂದರ್ಭದಲ್ಲೂ ನನ್ನನ್ನು ಮುಕ್ತವಾಗಿ ಭೇಟಿಯಾಗಬಹುದೆಂದು ಹೇಳಿದರು.
     ಸವಾಕ್ ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟಿನ್, ನಿವೃತ್ತ ಆರೋಗ್ಯ ಅಧಿಕಾರಿ ರವೀಂದ್ರ ನಾಯರ್ ಮಾತನಾಡಿದರು. ನೂತನ ಪದಾಧಿಕಾರಿಗಳಾಗಿ ದಯಾಪ್ರಸಾದ್ ಪಿಲಿಕುಂಜೆ(ಅಧ್ಯಕ್ಷ), ಸುಶ್ಮಿತ ಆರ್(ಕಾರ್ಯದರ್ಶಿ), ತಾರಾನಾಥ ಮಧೂರು, ರವೀಂದ್ರ ನಾಯರ್(ಉಪಾಧ್ಯಕ್ಷರು), ಹರಿಕಾಂತ್, ಶೋಭಾ ಬಿ(ಜೊತೆ ಕಾರ್ಯದರ್ಶಿ), ಶೇಖರ್ ಬೇಕಲ್(ಕೋಶಾ„ಕಾರಿ) ಆಯ್ಕೆಯಾದರು. ಕಾಸರಗೋಡು ವಲಯದ ಹಿರಿಯ ಕಲಾವಿದರನ್ನು ಸಮ್ಮಾನಿಸಲಾಯಿತು. ನಂತರ ಸ್ಪೂರ್ತಿ ಉದಯ ಕಲ್ಲೂರಾಯ, ಪ್ರೀತಿ ಉದಯ ಕಲ್ಲೂರಾಯ ಅವರಿಂದ ಭರತನಾಟ್ಯ ಹಾಗು ಶೋಭಾ ಬದಿಯಡ್ಕ ಬಳಗದವರಿಂದ ಜನಪದ ನೃತ್ಯವು ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries