ಕಾಸರಗೋಡು: ಐಸಿಎಆರ್-ಸಿಪಿಸಿಆರ್‍ಐಯಲ್ಲಿ ಹಿಂದಿ ಜ್ಞಾನ ವರ್ಧನೆ ಯೋಜನೆಯ ಒಂದು ತಿಂಗಳ ಕಾರ್ಯಕ್ರಮ ಸಮಾರೋಪಗೊಂಡಿತು. ಇದರ ಅಂಗವಾಗಿ ಸಿಪಿಸಿಆರ್‍ಐಯ ಸಿಬ್ಬಂದಿಗಳಿಗೆ ಹಾಗು ಕೇಂದ್ರೀಯ ವಿದ್ಯಾಲಯ ನಂ.1 ಮತ್ತು 2 ರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು.
ಸಿಪಿಆರ್‍ಐಯ ನಿರ್ದೇಶಕಿ ಡಾ.ಅನಿತಾ ಕರುಣ್ ಅಧ್ಯಕ್ಷತೆ ವಹಿಸಿದರು. ಯುನೈಟೆಡ್ ಇನ್ಶೂರೆನ್ಸ್ ಕಂಪೆನಿಯ ಡಿವಿಷನಲ್ ಮೆನೇಜರ್ ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರಾಷ್ಟ್ರೀಯ ಭಾಷೆಯ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಸಿಸ್ಟೆಂಟ್ ಫೈನಾನ್ಸ್ ಆಫೀಸರ್ ರಾಮ್ ಅವತಾರ್ ಪರಾಶರ್ ಸ್ವಾಗತಿಸಿದರು. ಚೀಫ್ ಟೆಕ್ನಿಕಲ್ ಆಫೀಸರ್ ಕೆ.ಶ್ರೀಲತಾ ವಂದಿಸಿದರು.

