ಕಾಸರಗೋಡು: ವಿಶ್ವ ಪೆÇೀಲಿಯೋ ದಿನಾಚರಣೆ ಅಂಗವಾಗಿ ರೋಟರಿ ನೇತೃತ್ವದಲ್ಲಿ ಅಂತರ್ ಜಿಲ್ಲಾ ಕಾರು ರ್ಯಾಲಿಗೆ ಕಾಂಞಂಗಾಡ್‍ನಲ್ಲಿ ಸ್ವಾಗತ ನೀಡಲಾಯಿತು.
ಜಿಲ್ಲಾ ಪೆÇಲೀಸ್ ವರಿಷ್ಠಾ„ಕಾರಿ ಜೇಮ್ಸ್ ಜೋಸೆಫ್ ಉದ್ಘಾಟಿಸಿದ ರ್ಯಾಲಿಗೆ ಕಾಂಞಂಗಾಡ್ ಮಿಡ್ ಟೌನ್ ರೋಟರಿ ಸದಸ್ಯರು ಸ್ವಾಗತಿಸಿದರು. ಕಾಸರಗೋಡಿನಿಂದ ಕಲ್ಲಿಕೋಟೆಯ ವರೆಗೆ ರ್ಯಾಲಿ ನಡೆಯಲಿದೆ. ಕಾಸರಗೋಡು ರೋಟರಿ ಕ್ಲಬ್ ರ್ಯಾಲಿಯನ್ನು ಆಯೋಜಿಸಿದೆ. ರ್ಯಾಲಿ ಕೋ-ಆರ್ಡಿನೇಟರ್ ಎಂ.ಟಿ.ದಿನೇಶ್, ಅಸಿಸ್ಟೆಂಟ್ ಗವರ್ನರ್ ಎಂ.ಕೆ.ರಾಧಾಕೃಷ್ಣನ್, ಕಾಂಞಂಗಾಡ್ ರೋಟರಿ ಅಧ್ಯಕ್ಷ ಡಾ|ಕೆ.ಜಿ.ಸತ್ಯನಾರಾಯಣ, ಕಾಸರಗೋಡು ರೋಟರಿ ಅಧ್ಯಕ್ಷ ಕೆ.ಲಜೀಶ್, ಕೆ.ನಾರಾಯಣನ್ ನಾಯರ್, ಎಂ.ಎಸ್.ಪ್ರದೀಪ್, ಎಂ.ಅರುಣ್, ಎ.ರಾಧಾಕೃಷ್ಣನ್, ಬಿ.ರಾಂದಾಸ್, ಬಿ.ಗಿರೀಶ್ ನಾಯಕ್, ಟಿ.ಜೆ.ಸೆಬಾಸ್ಟಿನ್ ಮೊದಲಾದವರು ಮಾತನಾಡಿದರು.


