ಮಂಜೇಶ್ವರ: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮತಚಲಾವಣೆ ನಡೆಸಿದವರಲ್ಲಿ ಮಹಿಳಾ ಮತದಾತರೇ ಅಧಿಕರಗಿದ್ದಾರೆ.
ಪುರುಷರಿಗಿಂತ 10,336 ಮಹಿಳೆಯರು ಅಧಿಕರಾಗಿ ಈ ಬಾರಿ ಮತದಾನ ನಡೆಸಿದ್ದಾರೆ. ಮತದಾನದ ದಿನ 86,558 ಮಹಿಳೆಯರು ಮತದಾನ ನಡೆಸಿದ್ದಾರೆ. 76,192 ಪುರುಷರು ಮತನೀಡಿದ್ದಾರೆ. ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 2,14,779 ಮತದಾತರಿದ್ದು, ಇವರಲ್ಲಿ 1,07,851 ಪುರುಷರೂ, 1,06,928 ಮಂದಿ ಮಹಿಳೆಯರು. ಅತ್ಯಧಿಕ ಮಹಿಳಾ ಮತದಾತರು(16,609) ಇರುವ ಗ್ರಾಮಪಂಚಾಯತ್ ಮಂಗಲ್ಪಾಡಿಯಾಗಿದೆ. ಇಲ್ಲಿ ಪುರುಷರಗಿಂತ 3569 ಮಹಿಳೆಯರು ಅಧಿಕರಾಗಿ ಮತದಾನ ನಡೆಸಿದ್ದಾರೆ. ಮಂಜೇಶ್ವರದಲ್ಲಿ 9336 ಪುರುಷರು ಮತದಾನ ನಡೆಸಿದರೆ, ಇದಕ್ಕಿಂತ ಅಧಿಕವಾಗಿ 3460 ಮಹಿಳೆಯರು ಮತ ಚಲಾಯಿಸಿದ್ದಾರೆ. ಕುಂಬಳೆಯಲ್ಲಿ ಪುರುಷರಿಗಿಂತ 3460 ಮಹಿಳೆಯರು ಅಧಿಕವಾಗಿ ಮತದಾನ ಮಾಡಿದ್ದಾರೆ. ಎಣ್ಮಕಜೆ ಗ್ರಾಮಪಂಚಾಯತ್ ಹೊರತುಪಡಿಸಿ ಕ್ಷೇತ್ರದ ಎಲ್ಲ ಪಂಚಾಯತ್ ಗಳಲ್ಲೂ ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಮತದಾನ ನಡೆಸಿದವರು.

