ಬದಿಯಡ್ಕ : ಕಾಸರಗೋಡು ಜಿಲ್ಲಾ ಯುವ ಬರಹಗಾರರ ಒಕ್ಕೂಟ ಹಾಗೂ ಬೆಂಗಳೂರಿನ ಕೆದಿಲಾಯ ಪ್ರತಿಷ್ಠಾನದ ಕಾಸರಗೋಡು ಗಡಿನಾಡ ಘಟಕದ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಮಕ್ಕಳ ಶತಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.
ಈ ಕವಿಗೋಷ್ಠಿಯು ನ.10ರಂದು ಬೆಳಗ್ಗೆ 10ರಿಂದ ಬದಿಯಡ್ಕದ ನವಜೀವನ ಪೌಢಶಾಲೆಯಲ್ಲಿ ನಡೆಯಲಿದೆ. ಭಾಗವಹಿಸುವ ಕವಿಗಳಿಗೆ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಗುವುದು. ಆಸಕ್ತರು 18 ವರ್ಷಕ್ಕಿಂತ ಕೆಳಗಿನ ವಯೋಮಾನದವರಾಗಿದ್ದು, 12 ಗೆರೆಗಳನ್ನು ಮೀರದ ಕನ್ನಡ ಭಾಷೆಯಲ್ಲಿ ಬರೆದ ಕವನಗಳನ್ನು ಅಂಚೆಕಾರ್ಡಿನಲ್ಲಿ ಬರೆದು ನ.5ರ ಮೊದಲು ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಕವನಗಳನ್ನು ಪುಂಡೂರು ಪ್ರಭಾವತಿ ಕೆದಿಲಾಯ, ಶಿಕ್ಷಕಿ, ನವಜೀವನ ಪ್ರೌಢಶಾಲೆ ಪೆರಡಾಲ, ಬದಿಯಡ್ಕ, ಕಾಸರಗೋಡು ಜಿಲ್ಲೆ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 8547485922ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

