ಮಂಜೇಶ್ವರ: ಕೊಡ್ಲಮೊಗರು ಎಸ್‍ವಿವಿಎಚ್‍ಎಸ್ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಕುಂಜತ್ತೂರು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಐಟಿ ಮೇಳದ ಮಲಯಾಳಂ ಟೈಪಿಂಗ್ ವಿಭಾಗದಲ್ಲಿ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನು 8 ನೇ ತರಗತಿಯ ದೇವಪ್ರಿಯ ಡಿ. ಪಡೆದಿದ್ದಾರೆ. ಡಿಜಿಟಲ್ ಪೈಂಟಿಂಗ್‍ನಲ್ಲಿ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನು ಹತ್ತನೇ ತರಗತಿಯ ವಿದ್ಯಾರ್ಥಿ ಧನುಷ್ ಸಿ. ಪಡೆದಿದ್ದಾರೆ.
ಗಣಿತ ಮೇಳದ ಸಿಂಗಲ್ ಪೆÇ್ರಜೆಕ್ಟ್ ವಿಭಾಗದಲ್ಲಿ ಎ ಗ್ರೇಡ್ ಹಾಗು ಸಯನ್ಸ್ ಟ್ಯಾಲೆಂಟ್ ಸರ್ಚ್ ಎಕ್ಸಾಮ್ ನಲ್ಲಿ ಎ ಗ್ರೇಡ್‍ನೊಂದಿಗೆ ದ್ವಿತೀಯ ಸ್ಥಾನವನ್ನು ಹತ್ತನೇ ತರಗತಿ ವಿದ್ಯಾರ್ಥಿ ಅಶಿಕಾ ಮತ್ತು ಅದರ್ ಚಾಟ್ರ್ಸ್ ವಿಭಾಗದಲ್ಲಿ ಎ ಗ್ರೇಡ್‍ನೊಂದಿಗೆ ದ್ವಿತೀಯ ಸ್ಥಾನ ಪಡೆದ ರಮ್ಲಾತುಲ್ ಶಿಫಾ ಅವರು ಉದುಮದಲ್ಲಿ ನಡೆಯುವ ಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗು ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದರು.


