ಕಾಸರಗೋಡು: ಮಹಿಳಾ ಪ್ರಬಲೀಕರಣ ಚಟುವಟಿಕೆಗಳಿಗೆ ನೇತೃತ್ವ ನೀಡುತ್ತಿರುವ ಕುಟುಂಬಶ್ರೀ ಕಾರ್ಯಕರ್ತೆಯರು ಹತ್ತನೇ ತರಗತಿ ತೇರ್ಗಡೆಗೊಳ್ಳುವ ನಿಟ್ಟಿನಲ್ಲಿ ಹತ್ತನೇ ತರಗತಿ ತತ್ಸಮಾನ ತರಬೇತಿ 2020 ಜ.1ರಂದು ಆರಂಭಗೊಳ್ಳಲಿದೆ.
ಈ ತರಬೇತಿಗೆ ನೋಂದಣಿ ನಡೆಸುವ ನಿಟ್ಟಿನಲ್ಲಿ ಪಂಚಾಯತ್,ನಗರಸಭೆ ಗಳ ವ್ಯಾಪ್ತಿಯ 50 ಕುಟುಂಬಶ್ರೀ ಕಾರ್ಯಕರ್ತರಿಗೆ ಒಂದು ತತ್ಸಮಾನಕಲಿಕಾ ಕೇಂದ್ರ ಎಂಬ ಪ್ರಕಾರ ಕೇಂದ್ರ ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗುವುದು. ಕುಟುಂಬಶ್ರೀ ಸಿ.ಡಿ.ಎಸ್.ಅಧ್ಯಕ್ಷೆಯರ ನೇತೃತ್ವದಲ್ಲಿ ಅರ್ಹರನ್ನು ಪತ್ತೆಮಾಡುವ ಕ್ರಮ ಆರಂಭಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದರು.

