ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಚುಕ್ಕಿನಡ್ಕದ ಶ್ರೀಅಯ್ಯಪ್ಪ ಸೇವಾ ಸಂಘ ಭಜನಾ ಮಂದಿರದ ರಜತ ಸಂಭ್ರಮದ ಅಂಗವಾಗಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶಬರಿ ಭೋಜನ ಶಾಲೆಗೆ ಸೋಮವಾರ ವಿದ್ಯುಕ್ತವಾದ ಶಿಲಾನ್ಯಾಸ ನೆರವೇರಿತು.
ಶಿಲ್ಪಿ ಹರಿಶ್ಚಂದ್ರ ನೆಟ್ಟಣಿಗೆ ಅವರ ನೇತೃತ್ವದಲ್ಲಿ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಶಿಲಾನ್ಯಾಸ ನೆರವೇರಿಸಿದರು. ಈ ಸಮದರ್ಭ ಪ್ರಥಮ ದೇಣಿಗೆಯನ್ನು ನೀಡಿ ಮಾತನಾಡಿದ ಗೋಪಾಲಕೃಷ್ಣ ಪೈ ಅವರು ಉದ್ದೇಶಿತ ಕಾರ್ಯಯೋಜನೆಗಳು ಶ್ರೀದೇವರ ಕೃಪೆಯಿಂದ ಶೀಘ್ರ ಪೂರ್ಣಗೊಂಡು ಮುಂದಿನ ಡಿಸೆಂಬರ್ 21 ರಂದು ನಡೆಯಲಿರುವ ಶ್ರೀಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವದ ಸಂದರ್ಭ ಉದ್ಘಾಟನೆಗೊಳ್ಳಲಿ ಎಮದು ಶುಭಹಾರೈಸಿದರು.
ಶ್ರೀಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ವೆಂಕಪ್ಪ ನಾಯ್ಕ ಮಾನ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಗುರುಸ್ವಾಮಿಗಳಾದ ಕಞÂ್ಞಕಣ್ಣ ಮಣಿಯಾಣಿ, ನಾರಾಯಣ ಗುರುಸ್ವಾಮಿ ಕಾರ್ಮಾರು, ಚಂದ್ರಶೇಖರ ನಾಯ್ಕ ಚುಕ್ಕಿನಡ್ಕ ಮೊದಲಾದವರು ಉಪಸ್ಥಿತರಿದ್ದರು.


