ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಮುಳ್ಳೇರಿಯ ವಲಯ ಸಮಿತಿಯ ಆಶ್ರಯದಲ್ಲಿ ಭಾನುವಾರ ದಸರಾ ನಾಡಹಬ್ಬ ಹಾಗೂ ದೀಪಾವಳಿ ಸಂಭ್ರಮ-2019ನ್ನು ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಘಟಕ ಡಾ. ಕೆ ಎನ್ ಅಡಿಗ ಅಡೂರು ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಶಿವಳ್ಳಿ ಬ್ರಾಹ್ಮಣ ಸಭಾದ ಸದಸ್ಯರಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಈ ಸಂದರ್ಭದಲ್ಲಿ ಅಡೂರಿನ ಶ್ರೀಪ್ರಿಯಾ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮ ನಡೆಯಿತು. ಭಜನೆಯಲ್ಲಿ ಸತ್ಯಪ್ರೇಮ ಭಾರಿತ್ತಾಯ, ಚಂಚಲಾ ಸರಳಾಯ, ಜಯಲಕ್ಷ್ಮಿ ತಂತ್ರಿ, ಆಶಾ ಆರ್ ಕೇಕುಣ್ಣಾಯ ಆಲಂತಡ್ಕ, ರಾಜಿತಾ ಸರಳಾಯ, ಪ್ರತಿಮಾ ಬಾರಿತ್ತಾಯ ಭಾಗವಹಿಸಿದ್ದರು. ಆದ್ಯಂತ್ ಅಡೂರು ತಬಲಾವಾದನದಲ್ಲಿ ಸಹಕರಿಸಿದರು. ಉತ್ಸವದ ಅಂಗವಾಗಿ ಸಾಕ್ಷಿ ಕೇಕುಣ್ಣಾಯ ಆಲಂತಡ್ಕ ಇವರಿಂದ ಸುಗಮ ಸಂಗೀತ, ಸುಶಾಂತ್ ಮಾಲೆಂಕಿ ಅವರಿಂದ ಯೋಗಾಸನ, ರಾಜಿತಾ ಸರಳಾಯ ಅವರಿಂದ ವಯಲಿನ್ ವಾದನ, ಪ್ರತಿಮಾ ಭಾರಿತ್ತಾಯ, ಶ್ಯಾವ್ಯ ವೈ ಇವರಿಂದ ಶಾಸ್ತ್ರೀಯ ಸಂಗೀತ, ಸಂಭ್ರಮ್ ಕುಮಾರ್ ಸರಳಾಯ ಇವರಿಂದ ಭಜನ್, ಆದ್ಯಂತ್ ಅಡೂರು ಅವರಿಂದ ತಬಲಾವಾದನ ಸಹಿತ ಭಕ್ತಿಗಾಯನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಪುರಾಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ಯಾವ್ಯ ವೈ ಹಾಗೂ ಆದ್ಯಂತ್ ಅಡೂರು ಪ್ರಥಮ, ಸುಶಾಂತ್ ಮಾಲೆಂಕಿ ದ್ವಿತೀಯ ಹಾಗೂ ಸಂಭ್ರಮ ಸರಳಾಯ ತೃತೀಯ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಭಾರಿತ್ತಾಯ, ಶಿವಳ್ಳಿ ಬ್ರಾಹ್ಮಣ ಸಭಾದ ರಕ್ಷಾಧಿಕಾರಿ ಪಣಿಯೆ ಸೀತಾರಾಮ ಕುಂಜತ್ತಾಯ, ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ, ವಲಯ ಖಜಾಂಜಿ ಶ್ರೀಪ್ರಸಾದ ಭಾರಿತ್ತಾಯ, ಸದಸ್ಯರಾದ ರಾಜಾರಾಮ ಸರಳಾಯ, ರವಿರಾಜ್ ಕೇಕುಣ್ಣಾಯ, ಶ್ರೀಪತಿ ಎಂ, ಸ್ನೇಹಾ ಕೇಕುಣ್ಣಾಯ, ಸಮೃದ್ಧ ಸರಳಾಯ, ಪ್ರೀತಿ ಅನಿಲ್ ಕುಮಾರ್, ಗುರುಚರಣ್, ಸತ್ಯನಾರಾಯಣ ಮನೊಳಿತ್ತಾಯ, ಸುಮಂಗಲಾ ಎಸ್ ಎನ್ ತಂತ್ರಿ, ಪದ್ಮ ಆರ್, ಶೋಭಾ, ಸಜಿತಾ, ಆಶಾ ಎ, ಚಂಚಲಾ ಎಸ್ ಮೊದಲಾದವರು ಭಾಗವಹಿಸಿದ್ದರು. ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ ತಂತ್ರಿ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


