ಮಧೂರು: ನವೀಕರಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಹಾಗು ಕಾರಣೀಕವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗಿನ ಶುಭಮುಹೂರ್ತದಲ್ಲಿ ಪ್ರಧಾನ ಗರ್ಭಗುಡಿಯ ದಾರಂದ ಪ್ರತಿಷ್ಠೆ ನಡೆಯಿತು.
ಶ್ರೀಮದ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ ಹಾಗು ಕೃಪಾಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ದಿವ್ಯ ಹಸ್ತದಿಂದ ವಿಧಿವಿಧಾನಗಳೊಂದಿಗೆ ಪ್ರತಿಷ್ಠೆ ಜರಗಿತು.
ಕಾರ್ಯಕ್ರಮದಲ್ಲಿ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ನವೀಕರಣ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ, ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಜೊತೆ ಕಾರ್ಯದರ್ಶಿಗಳಾದ ಎಂ.ಮುರಳಿ ಗಟ್ಟಿ, ನಾರಾಯಣಯ್ಯ ಮಧೂರು, ಮಂಜುನಾಥ ಕಾಮತ್, ಸದಸ್ಯ ವಿಠಲ ಶೆಟ್ಟಿ, ಪವಿತ್ರಪಾಣಿ ರತನ್ ಕುಮಾರ್ ಕಾಮಡ, ದೇವಸ್ಥಾನದ ಮುಖ್ಯ ಅರ್ಚಕ ಶೀಕೃಷ್ಣ ಉಪಾಧ್ಯಾಯ, ಅರ್ಚಕ ವೆಂಕಟಕೃಷ್ಣ ಕಲ್ಲೂರಾಯ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಾಬು ಮತ್ತು ನೌಕರ ವೃಂದ, ಪ್ರಬಂಧಕ ಗೋಪಾಲಕೃಷ್ಣ ಭಟ್, ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ, ಎಚ್.ರವೀಂದ್ರ ಆಳ್ವ, ಉದ್ಯಮಿ ಸುರೇಶ್, ವಿಷ್ಣು ಭಟ್, ಗಂಗಾಧರ ಮಣಿಯಾಣಿ, ಸುಧಾಕರ ಕೋಟೆಕುಂಜತ್ತಾಯ, ರಾಜೀವ್ ನಂಬಿಯಾರ್, ಜನಾರ್ದನ, ಬಾಲಕೃಷ್ಣ ನಂಬಿಯಾರ್, ಎಸ್.ಎನ್.ರಾಮ ಶೆಟ್ಟಿ, ಕೆ.ಗಿರೀಶ್, ಧರ್ಮಪಾಲ, ಯೋಗೀಶ್, ಗಿರೀಶ್, ಎಚ್.ರವೀಂದ್ರನಾಥ್, ಗಣೇಶ್ ಭಟ್ ನೀರ್ಚಾಲು, ನ್ಯಾಯವಾದಿ ಅನಂತ ರಾಮ್ ಮೊದಲಾದವರು ಉಪಸ್ಥಿತರಿದ್ದರು.
ಕುಂಬಳೆ ಸೀಮೆಯ ಪ್ರಮುಖ ದೇವಾಲಯವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ದೇವಸ್ಥಾನದ ಪ್ರಧಾನ ಗರ್ಭಗುಡಿಯ ದಾರಂದ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿ ಪುನೀತರಾದರು.