ಕುಂಬಳೆ: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ಮಾಯಿಪ್ಪಾಡಿಯಲ್ಲಿ ಕಾರ್ಯಾಚರಿಸುವ ಏಕ ಮಾತ್ರ ಕನ್ನಡ ಶಿಕ್ಷಕ ತರಬೇತಿ ಕೇಂದ್ರದ ಶೋಚನೀಯಾವಸ್ಥೆಯ ವಿರುದ್ಧ ಪ್ರತ್ಯಕ್ಷ ಹೋರಾಟ ನಡೆಸಲು ಅಲ್ಲಿನ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಮಾಯಿಪ್ಪಾಡಿ ತರಬೇತಿ ಕೇಂದ್ರದಿಂದ ತೇರ್ಗಡೆಯಾದ ವಿದ್ಯಾರ್ಥಿಗಳು ಅಧ್ಯಾಪಕರಾಗಿ ನೇಮಕಗೊಳ್ಳುತ್ತಾರೆ. ಆದರೆ ಇಲ್ಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಮಾಯಿಪ್ಪಾಡಿ ಡಯಟ್ ಕೇಂದ್ರದಲ್ಲಿ ಕನ್ನಡ ಪಠ್ಯಪುಸ್ತಕಗಳು ಇನ್ನೂ ವಿತರಣೆಯಾಗಿಲ್ಲ, ವೃತ್ತಿ ಶಿಕ್ಷಣ, ಕಲಾ ಶಿಕ್ಷಣ ಇತ್ಯಾದಿಗಳಿಗೆ ಬೇಕಾದ ಪರಿಕರಗಳು ಲಭ್ಯವಿಲ್ಲ. ಮಾಹಿತಿ ಶಿಬಿರ, ವಿಚಾರ ಸಂಕಿರಣಗಳು ಕನ್ನಡ ಭಾಷೆಯಲ್ಲಿ ನಡೆಯುತ್ತಿಲ್ಲ. ಕನ್ನಡ ಭಾಷಾ ಅಧ್ಯಾಪಕರ ನೇಮಕಾತಿ ಇದುವರೆಗೂ ನಡೆಸಿಲ್ಲ ಮೊದಲಾದ ಹತ್ತು ಹಲವು ಸಮಸ್ಯೆಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ.
ಈ ಕುರಿತು ಅಲ್ಲಿನ ತರಬೇತು ಪಡೆಯುವ ವಿದ್ಯಾರ್ಥಿಗಳು ಇತ್ತೀಚೆಗೆ ಸಭೆ ಸೇರಿ ಸಮಾಲೋಚನೆ ನಡೆಸಿ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿ ಒಂದು ತಿಂಗಳೊಳಗೆ ಸಮಸ್ಯೆ ಬಗೆ ಹರಿಸದಿದ್ದಲ್ಲಿ ತರಗತಿ ಬಹಿಷ್ಕರಿಸಿ ತೀವ್ರ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಈ ಬಗ್ಗೆ 5 ಮಂದಿಯ ಸಮಿತಿಯನ್ನು ರೂಪೀಕರಿಸಲಾಯಿತು. ಸೌಮ್ಯಾ, ವಿನಾಯಕ, ಶಿವಪ್ರಸಾದ್, ಶ್ರೀವತ್ಸ ಹಾಗು ನಿವೇದಿತ ಮೊದಲಾದವರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.
ಮಾಯಿಪ್ಪಾಡಿ ಅಧ್ಯಾಪಕರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ನಡೆಸಲಿರುವ ಹೋರಾಟಕ್ಕೆ ಕನ್ನಡ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ಸಾರಿದೆ. ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.