ಕುಂಬಳೆ: ಕುಂಬಳೆ ಜನ ಮೈತ್ರಿ ಪೆÇಲೀಸ್ ಹಾಗು ಕೃಷ್ಣ ನಗರದ ನಾಗರಿಕರಿಂದ ಕುಂಬಳೆ ಕೃಷ್ಣ ನಗರದ ಮೌನೇಶ್ ಮಂದಿರದಲ್ಲಿ ಜನಜಾಗ್ರತಿ ಶಿಬಿರ ನಡೆಯಿತು.
ಸಭೆಯನ್ನು ಗ್ರಾಮ ಪಂಚಾಯತಿ ಸದಸ್ಯ ಕೆ.ಸುಜಿತ್ ರೈ ನಿರ್ವಹಿಸಿ ಕೃಷ್ಣನಗರ ಪ್ರದೇಶದಲ್ಲಿ ರಾತ್ರಿ ವೇಳೆ ನೆಡೆಯುವ ಸಮಾಜ ದ್ರೋಹಿಗಳ ಅಟ್ಟಹಾಸವನ್ನು ತಡೆಯಲು ಕೃಷ್ಣ ನಗರದ ನಾಗರಿಕರು ಒಂದಾಗಬೇಕಾಗಿ ತಿಳಿಸಿದರು.
ಬಳಿಕ ನಡೆದ ತಿಳುವಳಿಕೆ ತರಬೇತಿಯನ್ನು ಕುಂಬಳೆ ಜನ ಮೈತ್ರಿ ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಪ್ರಕಾಶ್ ಕೆ. ಅವರು ನಡೆಸಿದರು. ಕಾರ್ಯಕ್ರಮದಲ್ಲಿ ಪರಿಸರದ ಹಿರಿಯರಾದ ವಿಠ್ಠಲ್ ಆಚಾರ್ಯ, ಕೃಷ್ಣ ಎ.ಕೆ, ಜಯಕುಮಾರ್, ಕೃಷ್ಣ ಮಾಸ್ತರ್, ನಾಗೇಶ್, ಪೆÇಲೀಸ್ ಅಧಿಕಾರಿ ವಿನೀತ್ ಹಾಗು ಹೆಚ್ಚಿನ ಸಂಖ್ಯೆಯ ಸ್ಥಳೀಯರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕೆ.ಗಣೇಶ್ ಆಚಾರ್ಯ ಅವರು ಸ್ವಾಗತಿಸಿ, ಮನೋಜ್ ಮಾಸ್ತರ್ ಅವರು ವಂದಿಸಿದರು.


