HEALTH TIPS

ಕೇಂದ್ರ, ಕೇರಳ ರಾಜ್ಯ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದ ಅರ್ಥವ್ಯವಸ್ಥೆ ಶಿಥಿಲ-ಮೀಟ್‍ದಿ ಪ್ರೆಸ್ ಕಾರ್ಯಕ್ರಮದಲ್ಲಿ ಎ.ಕೆ ಆಂಟನಿ ಅಭಿಪ್ರಾಯ

 
      ಕಾಸರಗೋಡು: ಎನ್‍ಡಿಎ ಆಡಳಿತ ದೇಶದ ಅರ್ಥ ವ್ಯವಸ್ಥೆಯನ್ನು ಸಂಪೂರ್ಣ ಶಿಥಿಲಾವಸ್ಥೆಗೆ ಕೊಂಡೊಯ್ದಿರುವುದಾಗಿ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ ಎ.ಕೆ ಆಂಟನಿ ತಿಳಿಸಿದ್ದಾರೆ. ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಪ್ರಚಾರಕಾರ್ಯದಲ್ಲಿ ಭಾಗವಹಿಸಲು ಸೋಮವಾರ ಜಿಲ್ಲೆಗೆ ಆಗಮಿಸಿದ್ದ  ಅವರು ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತ
ನಾಡಿದರು.
    ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಆಡಳಿತದ ತಪ್ಪು ಆರ್ಥಿಕ ನೀತಿಯಿಂದ ದೇಶದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆರ್ಥಿಕ ಕುಸಿತ ದೇಶದ ಅಭಿವೃದ್ಧಿಗೆ ಮಾರಕವಾಗಲಿರುವುದಾಗಿ ತಿಳಿಸಿದರು. ಕಾಸರಗೋಡಿನಲ್ಲಿ ಯುಪಿಎ ಕಾಲಾವಧಿಯಲ್ಲಿ ಸ್ಥಾಪಿಸಿದ್ದ ಎಚ್‍ಎಎಲ್ ಸಂಸ್ಥೆಯನ್ನು ಬೆಂಗಳೂರಿನ ನಂತರದ ಎರಡನೇ ಅತಿದೊಡ್ಡ ಘಟಕವನ್ನಾಗಿ ಮಾರ್ಪಡಿಸಬೇಕೆಂಬ ಅಂದಿನ ಕೇಂದ್ರಸರ್ಕಾರದ ತೀರ್ಮಾನಕ್ಕೆ ಎನ್‍ಡಿಎ ಎಳ್ಳುನೀರು ಬಿಟ್ಟಿದ್ದು, ಇಂದು ಕಾಸರಗೋಡಿನ ಎಚ್‍ಎಎಲ್ ಸಂಶ್ಥೆ ಸ್ಥಿತಿ ಶೋಚನೀಯಾವಸ್ಥೆ ತಲುಪಿರುವುದಾಗಿ ತಿಳಿಸಿದರು.
             ಕೇಂದ್ರ-ರಾಜ್ಯ ಸರ್ಕಾರ ಕಾರಣ:
    ದೇಶದ ಅರ್ಥ ವ್ಯವಸ್ಥೆಗೆ ಎನ್‍ಡಿಎ ಸರ್ಕಾರ ಕಾರಣವಾಗಿದ್ದರೆ, ಕೇರಳದ ದುಸ್ಥಿತಿಗೆ ಇಲ್ಲಿನ ಎಡರಂಗ ಸರ್ಕಾರ ನೇರ ಹೊಣೆಯಾಗಿದೆ. ಕೇರಳದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೃಷಿವಲಯ ಸಂಪೂರ್ಣ ನೆಲಕಚ್ಚಿದೆ. ಕೃಷಿವಲಯದ ಸಂರಕ್ಷಣೆಗಾಗಿ ಕೃಷಿಕರು "ಕಣ್ಣೀರ ಸಂಕೋಲೆ"ಪ್ರತಿಭಟನೆ ಮೂಲಕ ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೇಂದ್ರ ಮತ್ತು ಕೇರಳ ಸರ್ಕಾರ ತಮ್ಮ ತಪ್ಪುಗಳನ್ನು ತಿದ್ದಿ, ಜನಸಾಮಾನ್ಯರನ್ನು ಸಂಕಷ್ಟದಿಂದ ಪಾರುಮಾಡಲು ಮುಂದಾಗಬೇಕು ಎಂದು ತಿಳಿಸಿದರು.
    ಪ್ರೆಸ್‍ಕ್ಲಬ್ ಅಧ್ಯಕ್ಷ ಟಿ.ಎ ಶಾಫಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ವಿ ಪದ್ಮೇಶ್, ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ ಕುಞÂಕಣ್ಣನ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries