HEALTH TIPS

ಚುನಾವಣಾ ಆಯೋಗ ನೀಡಿರುವ ಸಲಹೆ ಕಟ್ಟುನಿಟ್ಟಾಗಿ ಪಾಲಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ

 
     ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕ್‍ಗಳು ಚುನಾವಣೆ ಆಯೋಗ ತಿಳಿಸಿರುವ ಆದೇಶಗಳನ್ನುಕಡ್ಡಾಯವಾಗಿ ಪಾಲಿಸಬೇಕು ಎಂದು ಚುನಾವಣಾ ಖರ್ಚುವೆಚ್ಚಗಳ ನಿರೀಕ್ಷಕ ಕಮಲ್ ಜೀತ್ ಕೆ.ಕಮಲ್ ಅವರು ತಿಳಿಸಿದ್ದಾರೆ.
    ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಸೋಮವಾರ ಉಪಚುನಾವಣೆ ಸಂಬಂಧ ನಡೆದ ಬ್ಯಾಂಕ್ ಸಿಬ್ಬಂದಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವ್ಯಕ್ತಿ ಯಾ ಸಂಸ್ಥೆಗಳು ನಡೆಸುವ ಸಂಶಯಕರ ಹಣದ ವ್ಯವಹಾರಗಳಿದ್ದಲ್ಲಿ ತಕ್ಷಣ ಜಿಲ್ಲಾ ಚುನಾವಣೆ ಅಧಿಕಾರಿ, ಖರ್ಚುವೆಚ್ಚ ಮೋನಿಟರಿಂಗ್ ಸೆಲ್ ಗೆ ಮಾಹಿತಿ ನೀಡಬೇಕು. ಉಪಚುನಾವಣೆಯ ಕಾಲಾವಧಿಯಲ್ಲಿ ಸಂಶಯಕರ ರೀತಿ ಒಂದು ಲಕ್ಷ ರೂ.ಗಿಂತ ಅಧಿಕ ನಗದನ್ನು ಹಿಂಪಡೆಯುವ (ವಿದ್ ಡ್ರಾ ಮಾಡುವುದು), ಠೇವಣಿಯಿರಿಸುವುದು,ಒಂದು ಬ್ಯಾಂಕ್ ಖಾತೆಯಿಂದ ಹಲವರ ಖಾತೆಗಳಿಗೆ ಆರ್.ಟಿ.ಜಿ.ಎಸ್., ಎನ್.ಇ.ಎಫ್.ಟಿ., ಮೂಲಕ ಹಣ ವರ್ಗಾವಣೆ ನಡೆಸುವುದು, ಅಭ್ಯರ್ಥಿ, ಅವರ ಪತ್ನಿ ಅಥವಾ ಪತಿಯ ಖಾತೆಯಿಂದ ನಿಗದಿತ ಖಾತೆಗಳಿಗೆ ಒಂದು ಲಕ್ಷ ರೂ. ಯಾ ಅದಕ್ಕಿಂತ ಅಧಿಕ ಮೊತ್ತ ವರ್ಗಾಯಿಸುವುದು ಅಥವಾ ಹಿಂಪಡೆಯುವುದು ನಡೆದಲ್ಲಿ ತಕ್ಷಣ ವರದಿ ಮಾಡುವಂತೆ ಆದೇಶಿಸಲಾಗಿದೆ. ಎಲ್ಲಬ್ಯಾಂಕ್ ಪ್ರಬಂಧಕರು ಜಿಲ್ಲಾಧಿಕಾರಿ ಅವರಿಗೆ ಚುನಾವಣೆಯ ಅವಧಿಯಲ್ಲಿ ನೀಡುವ ದೈನಂದಿನ ವರದಿಯ ವಿಚಾರದಲ್ಲಿ
ಉದಾಸೀನತೆ ತೋರಬಾರದು ಎಂದವರು ತಿಳಿಸಿದರು.
    10 ಲಕ್ಷ ರೂ.ಗಿಂತ ಅಧಿಕ ಹಣದ ವ್ಯವಹಾರ ನಡೆದಲ್ಲಿ ತಕ್ಷಣ ಬ್ಯಾಂಕ್ ಪ್ರಬಂಧಕ ಆದಾಯ ತೆರಿಗೆ ನೋಡೆಲ್ ಅಧಿಕಾರಿಗೂ ಮಾಹಿತಿ ನೀಡಬೇಕು. ಬ್ಯಾಂಕ್‍ಗಳಿಂದ ಎ.ಟಿ.ಎಂ.ಗೆ ನಗದು ಸಹಿತ ರವಾನೆಯಾಗುವ ವಾಹನಕ್ಕೆ ಬ್ಯಾಂಕ್‍ನ ಅಧಿಕೃತ ವಾಹನದ ಬೆಂಗಾವಲು ಒದಗಿಸಬೇಕು. ಎ.ಟಿ.ಎಂ.ಗೆ ರವಾನಿಸಲಾಗುವ ನಗದಿನ ಸ್ಪಷ್ಟ  ಲೆಕ್ಕಾಚಾರ ಇರಿಸಿಕೊಳ್ಳಬೇಕು ಎಂದು ನಿರೀಕ್ಷಕರು ತಿಳಿಸಿದ್ದಾರೆ.
    ಸಭೆಯಲ್ಲಿ ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ವಿವಿಧ ಬ್ಯಾಂಕ್ ಪ್ರತಿನಿಧಿಗಳುಉಪಸ್ಥಿತರಿದ್ದರು.
ಅಭ್ಯರ್ಥಿಗಳಿಂದ ಲೆಕ್ಕಾಚಾರ ಸಲ್ಲಿಕೆ:
     ಮಂಜೇಶ್ವರ ವಿಧಾನಸಭೆ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 7 ಮಂದಿ ಅಭ್ಯರ್ಥಿಗಳು ಸೋಮವಾರ ತಮ್ಮ ಪ್ರಚಾರದ ಎರಡನೇ ಹಂತದ ಖರ್ಚುವೆಚ್ಚದ ಗಣನೆ ಸಲ್ಲಿಸಿದ್ದಾರೆ. ಅ.8ರಿಂದ 12 ವರೆಗಿನ ವೆಚ್ಚಗಳ ಗಣನೆಗಳನ್ನು ಈ ಮೂಲಕ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಎಕ್ಸ್‍ಪೆಂಡೀಚರ್ ಮೋನಿಟರಿಂಗ್ ಸೆಲ್‍ಗೆ ಲೆಕ್ಕಾಚಾರ ಹಸ್ತ್ತಾಂತರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಎಕ್ಸ್ ಪೆಂಡೀಚರ್ ನಿರೀಕ್ಷಕ ಕಮಲ್ ಜೀತ್ ಕೆ.ಕಮಲ್ ಅವರ ನೇತೃತ್ವದಲ್ಲಿ ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ಸಹಾಯಕ ಎಕ್ಸ್ ಪೆಂಡೀಚರ್ ನಿರೀಕ್ಷಕ ಟಿ.ಇ.ಜನಾರ್ದನನ್ ಮೊದಲಾದವರ ತಂಡ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದರು.
ಕಳೆದ ಬಾರಿ ನಡೆದ ಮೊದಲ ಹಂತದ ಗಣನೆ ಸಲ್ಲಿಕೆ ವೇಳೆ ಹಾಜರಾಗದೇ ಇದ್ದ ಕಾರಣನೋಟೀಸು ಕಳುಹಿಸಲಾಗಿದ್ದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಸೋಮವಾರ ಜರುಗಿದ ಸಭೆಗೆ ಹಾಜರಾಗಿ ಗಣನೆಗಳನ್ನು ಹಾಜರುಪಡಿಸಿ, ಹಿಂದಿನ ಸಭೆಗೆ ಗೈರು ಹಾಜರಾದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಬಾರಿಯ ಸಭೆಯಲ್ಲಿ ಗಣನೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ನೋಟೀಸು ಕಳುಹಿಸಲಾಗಿದ್ದ ಮೂವರು ಅಭ್ಯರ್ಥಿಗಳು ಸೋಮವಾರ ನಡೆದ ಸಭೆಗೆ ಹಾಜರಾಗಿದ್ದು, ಸ್ಪಷ್ಟೀಕರಣ ನೀಡಿದರು. ಚುನಾವಣೆ ಅಧಿಕಾರಿ ವಿತರಿಸಿದ್ದ ಚುನಾವಣೆ ಖರ್ಚುವೆಚ್ಚ ರೆಜಿಸ್ಟರ್ ನಲ್ಲಿ ಅಭ್ಯರ್ಥಿಗಳು ದಾಖಲಿಸಿರುವ ಲೆಕ್ಕಪತ್ರವನ್ನು ಎಕ್ಸ್ ಪೆಂಡೀಚರ್ ಮೋನಿಟರಿಂಗ್ ಸೆಲ್ ನ ನಿಗಾದಲ್ಲಿ ಇರಿಸಲಾದ ಷ್ಯಾಡೋ ಒಬ್ಸರ್‍ವೇಷನ್ ರೆಜಿಸ್ಟರ್ ನೊಂದಿಗೆ ಹೋಲಿಸಿ ನೋಡಲಾಗುತ್ತದೆ. ಮುಂದಿನ ಲೆಕ್ಕಾಚಾರವನ್ನು ಅ.18ರಂದು ಸಲ್ಲಿಸುವಂತೆ ಸೂಚಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries