ಮುಳ್ಳೇರಿಯ: ಚಂದ್ರಗಿರಿ ಹವ್ಯಕ ವಲಯದ ನೇತೃತ್ವದಲ್ಲಿ ಕಣ್ಣಿನ ಪೊರೆ ತಪಾಸಣಾ ಉಚಿತ ಶಿಬಿರವು ಮುಳಿಯಾರು ಶ್ರೀಸುಬ್ರಹ್ಮಣ್ಯ ಕ್ಷೇತ್ರ ಪರಿಸರದಲ್ಲಿ ಭಾನುವಾರ ಸಂಪನ್ನವಾಯಿತು.
ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ, ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಆಶ್ರಯದಲ್ಲಿ ಶಿಬಿರವು ಜರುಗಿತು. ಶಿಬಿರದ ಉದ್ಘಾಟನೆಯನ್ನು ಮುಳಿಯಾರು ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ ದೀಪ ಬೆಳಗಿಸುವುದರೊಂದಿಗೆ ಚಾಲನೆಯನ್ನು ನೀಡಿದರು. ಗುರುವಂದನೆಯೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಭಾರತೀ ನೇತ್ರ ಚಿಕಿತ್ಸಾಲಯದ ಆಡಳಿತಾಧಿಕಾರಿ ಡಾ. ಯಂ.ಶ್ರೀಧರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಜುನಗುಳಿ ಯಸ್.ಯನ್.ಭಟ್ ಶುಭ ಹಾರೈಸಿದರು.
ಶಿಬಿರದಲ್ಲಿ ನೇತ್ರ ತಜ್ಞರಾಗಿ ಡಾ ಉನೈಸ ಸಹಕರಿಸಿದರು. ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದರು. ವಲಯಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಮೀನಗದ್ದೆ ಸ್ವಾಗತಿಸಿ ವಂದಿಸಿದರು. ಚಂದ್ರಗಿರಿ ವಲಯದ ಸಹಾಯ ವಿಭಾಗ ಪ್ರಧಾನ ಡಾ.ಕೃಷ್ಣರಾಜ ಕಾಟಿಪ್ಪಳ್ಳ ಕಾರ್ಯಕ್ರಮ ನಿರೂಪಿಸಿದರು.


