HEALTH TIPS

ಮುಂಡಿತ್ತಡ್ಕ ಶಾಲೆಯಲ್ಲಿ ಸಂಸ್ಕತ ಶಿಬಿರ

   
     ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ಸಂಸ್ಕøತ ಅಕಾಡೆಮಿ ಕೌನ್ಸಿಲ್ ವತಿಯ ಕಿರಿಯ ಪ್ರಾಥಮಿಕ ಶಾಲಾ  ಮಕ್ಕಳ 'ಬಾಲಮೋದಿನೀ' ಏಕ ದಿನ ಸಂಸ್ಕøತ ಶಿಬಿರ ಮುಂಡಿತ್ತಡ್ಕ ಯಸ್.ಎಂ.ಎಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು.
     ಶಾಲಾ ವ್ಯವಸ್ಥಾಪಕ ಜನಾರ್ಧನ ಮಾಸ್ತರ್ ಶಿಬಿರವನ್ನು  ಉದ್ಘಾಟಿಸಿ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಖಲೀಲ್ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಕಾರ್ಯದರ್ಶಿ ಪದ್ಮನಾಭ ನಾಯಕ್, ಮಾತೃ ಮಂಡಳಿ ಅಧ್ಯಕ್ಷೆ ಕಾಂತಿಕುಮಾರಿ ಶುಭ ಹಾರೈಸಿದರು.
     ಮುಖ್ಯ ಶಿಕ್ಷಕ ಗಣೇಶ್ ಕಾಮತ್ ಸ್ವಾಗತಿಸಿ,ಕುಂಬಳೆ ಉಪಜಿಲ್ಲಾ ಸಂಸ್ಕøತ ಕೌನ್ಸಿಲ್ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡಿಗ ವಂದಿಸಿದರು. ಸುಮಾರು 17 ಶಾಲೆಗಳ ಮಕ್ಕಳು ಶಿಬಿರದಲ್ಲಿ  ಭಾಗವಹಿಸಿದ್ದರು. ಮಕ್ಕಳಿಗೆ ಕಲಿಕೆ, ಆಟೋಟ ಚಟುವಟಿಕೆಗಳು ನಡೆದವು. ಸಂಜೆ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries