ಕುಂಬಳೆ: ಸೂರಂಬೈಲು ಸಮೀಪದ ಎಡನಾಡು ನಿವಾಸಿ ಈಶ್ವರ ಎಂಬವರು ಸ್ಟಾರ್ ವಿಮಾ ಕಂಪೆನಿಯಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ 2018ರಲ್ಲಿ ವಿಮೆ ಮಾಡಿಸಿದ್ದರು. 2018ರ ಡಿಸೆಂಬರ್ ನಲ್ಲಿ ಅದರ ಮಾರಾಟ ಪ್ರತಿನಿಧಿ ಉದಯಕುಮಾರ್ ಎಂಬವರಲ್ಲಿ 2019 ರೂ.ಪಾಲಿಸಿ ಮೊತ್ತ ಪಾವತಿಸಲು ನೀಡಿದ್ದರು. ಆದರೆ ಆ ಮೊತ್ತವನ್ನು ಕಂಪೆನಿಗೆ ಪಾವತಿಸದೆ ಉದಯಕುಮಾರ್ ವಂಚಿಸಿದ್ದರು. ಬಳಿಕ ಈಶ್ವರ ಅವರು 2019ರ ಜನವರಿ 30 ರಂದು ಹಣ ಪಾವತಿಸಿ ವಿಮೆ ನವೀಕರಿಸಿದ್ದರು. ಈ ಮಧ್ಯೆ ಜ.31 ರಂದು ಈಶ್ವರ ಅವರ ಪುತ್ರ ಅಪಘಾತಕ್ಕೊಳಗಾದನು. ಈ ಸಂದರ್ಭ ನಾಯನ್ಮಾರ್‍ಮೂಲೆಯ ಇ.ಕೆ.ನಾಯನಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಪುತ್ರನ ಚಿಕಿತ್ಸಾ ವೆಚ್ಚದ ಬಗ್ಗೆ ಸ್ಟಾರ್ ವಿಮಾ ಕಂಪೆನಿಯ ಪ್ರಬಂಧಕರಲ್ಲಿ ಮನವಿ ನೀಡಿದಾಗ ವಿಮೆ ಅನುಮತಿಸುವುದಾಗಿ ಒಪ್ಪಿ ಆ ಬಳಿಕ ಅಪಘಾತ ನಡೆದು 24 ಗಂಟೆಗಳೊಳಗೆ ತಿಳಿಸಿಲ್ಲ ಎಂಬ ಸಬೂಬು ನೀಡಿ ವಿಮೆ ನೀಡಲು ನಿರಾಕರಿಸಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಈಶ್ವರ ಅವರು ನ್ಯಾಯವಾದಿ ಥೋಮಸ್ ಡಿಸೋಜ ಅವರ ಮೂಲಕ ಗ್ರಾಹಕರ ನ್ಯಾಯಾಲಯದಲ್ಲಿ ಇದೀಗ ದಾವೆ ಹೂಡಿದ ಅಪೂರ್ವ ಘಟನೆ ನಡೆದಿದೆ.
ಸ್ಟಾರ್ ಹೆಲ್ತ್ ವಿಮಾ ಕಂಪೆನಿಯಿಂದ ವಂಚನೆ-ಆರೋಪ
0
ಅಕ್ಟೋಬರ್ 16, 2019