HEALTH TIPS

ಕಲೆಯ ಇತಿಹಾಸದಲ್ಲಿ ಛಾಯಾಗ್ರಹಣ ರಂಗವು ಕ್ರಾಂತಿಯನ್ನು ಸೃಷ್ಟಿಸಿದೆ : ಪದ್ಮನಾಭನ್ ಬ್ಲಾತೂರ್


      ಕುಂಬಳೆ: ಚಿತ್ರಗಳನ್ನು ಸೆರೆಹಿಡಿಯಲು ಅನೇಕ ತ್ಯಾಗಗಳನ್ನು ಸಹಿಸುವ ಛಾಯಾಗ್ರಾಹಕ ಇಂದು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾನೆ. ಒಂದು ಸುಂದರವಾದ ಚಿತ್ರವು ಅದೆಷ್ಟೋ ಪಾಠವನ್ನು ಜಗತ್ತಿಗೆ ನೀಡುತ್ತಿದೆ. ಕಲೆಯ ಇತಿಹಾಸದಲ್ಲಿ ಛಾಯಾಗ್ರಹಣ ರಂಗವು ಕ್ರಾಂತಿಯನ್ನು ಸೃಷ್ಟಿಸಿದೆ ಎಂದು ಪ್ರಖ್ಯಾತ ನಾಟಕ ಕರ್ತೃ ಪದ್ಮನಾಭನ್ ಬ್ಲಾತೂರ್ ಅಭಿಪ್ರಾಯಪಟ್ಟರು.
      ಕುಂಬಳೆಯ ಮಾಧವ ಪೈ ಕಟ್ಟಡದ ಸಭಾಂಗಣದ ಪದ್ಮನಾಭ ನಗರದಲ್ಲಿ ಬುಧವಾರ ಜರಗಿದ ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಕಾಸರಗೋಡು ವಲಯ ಸಮ್ಮೇಳನವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
      ಅತಿಯಾದ ಮೊಬೈಲ್ ಫೆÇೀನ್ ಬಳಕೆಯ ಈ ಕಾಲಘಟ್ಟದಲ್ಲಿ ಸರಿಯಾದ ಛಾಯಾಗ್ರಾಹಕರೇ ನಮ್ಮ ಎದುರಿನಿಂದ ಮರೆಯಾಗುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ಒಂದು ಕಾಲದಲ್ಲಿ ಇದ್ದ ರೇಡಿಯೋ, ವಾಚುಗಳನ್ನು ದುರಸ್ತಿ ಮಾಡುವವರನ್ನು ಇಂದು ಕಾಣದಾಗಿದೆ. ಅಂತಹ ಒಂದು ಉದ್ದಿಮೆಯೇ ಇಂದು ಇಲ್ಲವಾಗಿದೆ. ಛಾಯಾಗ್ರಹಣ ರಂಗವೂ ಇಂತಹುದೇ ದೊಡ್ಡ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಅವರು ತಿಳಿಸಿದರು. ಬದಲಾವಣೆಗೆ ಹೊಂದಿಕೊಂಡು ಮುಂದುವರಿಯುವುದಾದರೆ ಮಾತ್ರ ಓರ್ವ ಛಾಯಾಗ್ರಾಹನಾಗಿ ತಮ್ಮ ಜೀವನವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆ. ಕಲೆಗೆ ಎಂದೂ ಕೊನೆಯಿಲ್ಲ ಎಂದು ಅವರು ತಿಳಿಸಿದರು.
       ಕಾಸರಗೋಡು ವಲಯ ಅಧ್ಯಕ್ಷ ಗೋವಿಂದನ್ ಚೆಂಗರಂಗಾಡು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.  ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಎಕೆಪಿಎ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರಶಾಂತ್ ತೈಕಡಪ್ಪುರಂ  ಶುಭಾಶಂಸನೆಗೈದರು. ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಶಾಫಿ, ಎಕೆಪಿಎ ರಾಜ್ಯ ಸಮಿತಿ ಸದಸ್ಯ ಎನ್.ಎ.ಭರತನ್, ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕ್ಕುನ್ನು, ಜಿಲ್ಲಾ ಕಾರ್ಯದರ್ಶಿ ಶ್ರೀಜಿತ್ ನಿಲಾಯಿ, ಜಿಲ್ಲಾ ಕೋಶಾಧಿಕಾರಿ ಮನೋಹರನ್, ಜಿಲ್ಲಾ ಉಪಾಧ್ಯಕ್ಷ ಸಂಜೀವ ರೈ, ಎಕೆಪಿಎ ಕಟ್ಟಡ ಸಮಿತಿ ಸಂಚಾಲಕ ಕೆ.ಸಿ.ಅಬ್ರಹಾಂ, ಎಕೆಪಿಎ ವಲಯ ಉಸ್ತುವಾರಿ ರಮೇಶ್ ಮಾವುಂಗಾಲು ಶುಭಹಾರೈಸಿದರು. ದೇಶೀಯ ಮಟ್ಟದ ಹಾಗೂ ವಿವಿಧೆಡೆ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಛಾಯಾಗ್ರಾಹಕ ದಿನೇಶ್ ಇನ್‍ಸೈಟ್ ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಸದಸ್ಯ ಅಶ್ವತ್ಥ್‍ರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಎಕೆಪಿಎ ವಲಯ ಕಾರ್ಯದರ್ಶಿ ಚಂದ್ರಮೋಹನ್ ಸ್ವಾಗತಿಸಿ, ಉಪಾಧ್ಯಕ್ಷ ಸುನಿಲ್ ಕುಮಾರ್ ಪಿ.ಟಿ. ವಂದಿಸಿದರು.  ಸುರೇಶ್ ಆಚಾರ್ಯ ಪ್ರಾರ್ಥಿಸಿದರು.
       ನೂತನ ಕುಂಬಳೆ ವಲಯ ಅಸ್ತಿತ್ವಕ್ಕೆ : ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್‍ನ ಕಾಸರಗೋಡು ವಲಯದಲ್ಲಿ ಸದಸ್ಯರ ಏರಿಕೆಯನ್ನು ಕಂಡ ಹಿನ್ನೆಲೆಯಲ್ಲಿ ಎಕೆಪಿಎ ಕುಂಬಳೆ ವಲಯವನ್ನು ನೂತನವಾಗಿ ರೂಪೀಕರಿಸಲಾಯಿತು. ಜಿಲ್ಲೆಯ 4ನೇ ವಲಯವಾಗಿ ಕುಂಬಳೆ ವಲಯವನ್ನು ಪ್ರತಿನಿಧಿ ಸಮ್ಮೇಳನದಲ್ಲಿ ಆರಿಸಲಾಯಿತು. ಕಾಸರಗೋಡು ವಲಯ ಅಧ್ಯಕ್ಷ ಗೋವಿಂದನ್ ಚೆಂಗರಂಗಾಡು ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕ್ಕುನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀಜಿತ್ ನಿಲಾಯಿ ಮಾತನಾಡಿದರು. ವಲಯ ಕೋಶಾಧಿಕಾರಿ ಮೈಂದಪ್ಪ ಲೆಕ್ಕಪತ್ರ ಹಾಗೂ ಚಂದ್ರಮೋಹನ್ ವರದಿ ಮಂಡಿಸಿದರು. ಕಾಸರಗೋಡು ಹಾಗೂ ನೂತನ ಕುಂಬಳೆ ವಲಯ ಸಮಿತಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು. ವಲಯ ಜೊತೆ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್. ಸ್ವಾಗತಿಸಿ, ಉಪಾಧ್ಯಕ್ಷ ರತೀಶ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries