ಬದಿಯಡ್ಕ: ಭಾರತೀಯ ಪರಂಪರೆಯಲ್ಲಿ ಸ್ವಗೃಹ, ವಿವಾಹ ಹಾಗೂ ಸಂತಾನ ಪ್ರಾಪ್ತಿಗೆ ವಿಶೇಷ ಮಹತ್ವವಿದೆ.ಈ ಕಾರಣದಿಂದ ಇವುಗಳ ಪ್ರಾಪ್ತಿಗೆ ಸುಕೃತ ಫಲದ ಪುಣ್ಯ ಬೇಕಾಗುತ್ತದೆ ಎಂಬ ನಂಬಿಕೆ. ಇದರಿಂದ ಬಹುತೇಕರು ಇವುಗಳನ್ನು ಜೀವಮಾನದ ಪ್ರಧಾನ ಭೂಮಿಕೆಯಾಗಿ ಸದಾ ನೆನಪಲ್ಲಿ ಉಳಿಯುವಂತೆ ಮಾಡುವಲ್ಲಿ ಹೊಸ ಹೊಸ ಮುಖಗಳತ್ತ ಮನಮಾಡುತ್ತಾರೆ.
ಇತ್ತೀಚೆಗಿನ ಹೊಸ ಟ್ರೆಂಡ್ ಆಗಿ ಬೆಳೆದುಬರುತ್ತಿರುವುದು ವಿವಾಹ, ಗೃಹ ಪ್ರವೇಶಾದಿಗಳ ಆಮಂತ್ರಣ ಪತ್ರಿಕೆಯನ್ನು ನವೀನ ರೀತಿಯಲ್ಲಿ ರಚಿಸಲು ಮುಂದಾಗಿರುವುದು ಹೆಚ್ಚು ಗಮನೀಯವಾಗಿ ಕಂಡುಬರುತ್ತಿದೆ. ನೀರ್ಚಾಲು ಸಮೀಪದ ಪುದುಕೋಳಿಯ ತಿಲಕ್ ರಾಜ್ ಎಂಬವರ ವಿವಾಹ ನವಂಬರ್ 3 ರಂದು ನಡೆಯಲಿದ್ದು, ಅವರು ತಮ್ಮ ಮಿತ್ರರಿಗೆ ವಿತರಿಸಲಿರುವ ವಿವಾಹ ಆಮಂತ್ರಣ ಪತ್ರಿಕೆಯನ್ನು ವಾಟ್ಸ್ ಆಫ್ ಸಂದೇಶದ ಮಾದರಿ ಮುದ್ರಿಸಿ ಗಮನ ಸೆಳೆದಿದ್ದಾರೆ.
ಪುದುಕೋಳಿಯ ಸಂಜೀವ ಚೆಟ್ಟಿಯಾರ್-ಶ್ಯಾಮಲಾ ದಂಪತಿಗಳ ಎರಡನೇ ಸುಪುತ್ರ ತಿಲಕ್ ರಾಜ್ ಅವರ ವಿವಾಹ ನ.3 ರಂದು ಬದಿಯಡ್ಕದ ರಾಮಚಂದ್ರ ಚೆಟ್ಟಿಯಾರ್ ಅವರ ಸುಪುತ್ರಿ ದಿವ್ಯಶ್ರೀ ಬಿ. ಅವರೊಂದಿಗೆ ನಾಯ್ಕಾಪು ಸಮೀಪದ ನಾರಾಯಣಮಂಗಲದ ಶ್ರೀಚೀರುಂಭಾ ಭಗವತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ತಮ್ಮ ವಿವಾಹವನ್ನು ಅವಿಸ್ಮರಣೀಯಗೊಳಿಸುವ ಉದ್ದೇಶದಿಂದ ತಿಲಕ್ ರಾಜ್ ಅವರು ವಾಟ್ಸ್ ಆಫ್ ಸಂದೇಶ ರೀತಿಯ ಮಾದರಿಯಲ್ಲಿರುವ ವಿವಾಹ ಆಮಂತ್ರಣ ಮುದ್ರಿಸಿದ್ದಾರೆ. ಆರಂಭದಲ್ಲಿ ಆಂಗ್ಲ ಭಾಷೆಯ ಸಾಮಾನ್ಯ ಬಳಕೆಯ ಹಾಯ್ ಎಂಬಲ್ಲಿಂದ ಆರಂಭಗೊಳ್ಳುವ ಪತ್ರಿಕೆ ತಮ್ಮ ಮಾತೃಭಾಷೆಯಾದ ಮಲೆಯಾಳದಲ್ಲಿ ತನ್ನ ವಿವಾಹ ನ.3 ರಂದು ಇದ್ದು, ಎಲ್ಲರೂ ಆಗಮಿಸಬೇಕು ಎಂದಿದೆ. ಬಳಿಕ ಖಂಡಿತಾ ಬರುತ್ತೇವೆ.ಎಲ್ಲಿ ಮದುವೆ ಎಂಬ ರೀತಿಯ ಪ್ರತಿಸಂದೇಶ ಮುದ್ರಿತವಾಗಿದೆ. ವಿವಾಹವು ನಾರಾಯಣಮಂಗಲದ ಇಂತಹ ಸಭಾಂಗಣದಲ್ಲಿ, ನೀವು ಬರಲೇ ಬೇಕು ಎಂದಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಸರಿ.ಬರುತ್ತೇವೆ. ಮತ್ತು ಧನ್ಯವಾದ ಎಂಬಲ್ಲಿಗೆ ವಿವಾಹ ಆಮಂತ್ರಣ ಸಂದೇಶ ಕೊನೆಗೊಳ್ಳುತ್ತದೆ. ಆದರೆ ಹತ್ತಿರದ ಬಂಧುಗಳಿಗೆ ವಿತರಿಸಲು ಪಾರಂಪರಿಕ ಶೈಲಿಯ ಬೇರೆ ಆಮಂತ್ರಣವನ್ನೂ ಮುದ್ರಿಸಿದ್ದಾರೆ. ಔಷಧ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ತಿಲಕ್ ರಾಜ್ ಸ್ವ ಗ್ರಾಮದಲ್ಲಿ ತತ್ವಮಸಿ ಫ್ರೆಂಡ್ಸ್ ಕ್ಲಬ್ ಸಹಿತ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರೀಯ ಸದಸ್ಯರಾಗಿದ್ದಾರೆ.
ಅತ್ಯಂತ ಸರಳವಾದ ಸಂದೇಶಗಳೊಂದಿಗೆ ಹೆಚ್ಚು ಆಕರ್ಷಣೀಯತೆಯಿಂದ ಗಮನ ಸೆಳೆದಿರುವ ಇಂತಹ ವಿವಾಹ ಕರೆಯೋಲೆ ಪ್ರಥಮ ಪ್ರಯೋಗವಾಗಿದ್ದು, ಜನಾಕರ್óನೆಗೆ ಕಾರಣವಾಗುವುದರ ಜೊತೆಗೆ ಆಧುನಿಕತೆಯನ್ನು ಸಮರ್ಪಕವಾಗಿ ಬಳಸಿ ತಮ್ಮ ವಿವಾಹವನ್ನು ನೈಜವಾಗಿ ಅವಿಸ್ಮರಣೀಯಗೊಳಿಸಿದ ತಿಲಕ್ ರಾಜ್ ಅವರ ಪ್ರಯತ್ನ ಶ್ಲಾಘನೆಗೊಳಗಾಗಿದೆ.