HEALTH TIPS

ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆ

   
          ಕುಂಬಳೆ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಕಾಸರಗೋಡು ವಲಯದ ಮಾಸಿಕ ಸಭೆ ಭಾನುವಾರ ಮುಜುಂಗಾವಿನ ಜನಾರ್ದನ ಎ.ಪಿ.ಅವರ ಸ್ವಗೃಹದಲ್ಲಿ ನಡೆಯಿತು.
      ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯಾಧ್ಯಕ್ಷ ಚಕ್ರಪಾಣಿದೇವ ಪೂಜಿತ್ತಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಜನೆಯೊಂದಿಗೆ ಸಭೆ ಆರಂಭಗೊಂಡಿತು. ಡಿಸೆಂಬರ್ 21 ಹಾಗೂ 22 ರಂದು ನಡೆಯಲಿರುವ ಜಿಲ್ಲಾ ಶಿವಳ್ಳಿ ಸಾಂಸ್ಕøತಿಕೋತ್ಸವ ಹಾಗೂ ಅಕ್ಟೋಬರ್-ನವಂಬರ್ ತಿಂಗಳಲ್ಲಿ ನಡೆಯಲಿರುವ ಶಿವಳ್ಳಿ ಕ್ರೀಡೋತ್ಸವದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು. ಪದಾಧಿಕಾರಿ, ಸದಸ್ಯರಿಂದ ಸಲಹೆ ಸೂಚನೆಗಳನ್ನು ನೀಡಿದರು. ಯುಎಂಬಿಎಸ್ ಮಾಧ್ವ ಸಮಾಜದ ವತಿಯಿಂದ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸಲು ಅರ್ಹರಿಗೆ ಸೂಚಿಸಲಾಯಿತು. ದೇವ ಪೂಜಿತ್ತಾಯ ಟ್ರಸ್ಟ್ ವತಿಯಿಂದ ವಿತರಿಸಲಾಗುವ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಈ ಸಂದರ್ಭ ಸ್ವೀಕರಿಸಲಾಯಿತು.
      ವೆಂಕಟೇಶ ಪೆರಂಬುದರಾಯ ವರದಿ ವಾಚಿಸಿದರು. ಜನಾರ್ದನ ಎ.ಪಿ.ಸ್ವಾಗತಿಸಿ, ಶ್ರೀನಿವಾಸ ಕಣ್ಣರಾಯ ವಂದಿಸಿದರು. ಸಭೆ ನಿರ್ವಹಿಸಲು ಸಹಕರಿಸಿದ ಜನಾರ್ದನ ಎ.ಪಿ ಹಾಗೂ ಅವರ ಮನೆಯವರನ್ನು ಈ ಸಂದರ್ಭ ಅಭಿನಂದಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries