ಕಾಸರಗೋಡು: ರಾಜ್ಯದಲ್ಲಿ ನೋಂದಣಿ ನಡೆಸಿರುವ ಎಲ್ಲ ಸೀರೀಸ್ ಗಳಲ್ಲಿ ಸೇರಿರುವ ಒಂದರಿಂದ 500 ವರೆಗಿನ ವಾಹನಗಳ ಮಾಹಿತಿಗಳನ್ನು ಕೇಂದ್ರೀಕೃತ ಸಾಫ್ಟ್ ವೇರ್ ಆಗಿರುವ ವಾಹನ್ ಗೆ ವರ್ಗಾಯಿಸಲಾಗಿದೆ. ಇತರ ವಾಹನಗಳನನು ಶೀಘ್ರದಲ್ಲೇ ವರ್ಗಾಯಿಸಲಾಗುವುದು.
ವಾಹನ ಮಾಲೀಕರ ಗಮನಕ್ಕೆ :
1. ವಾಹನ್ ಸಾಫ್ಟ್ ವೇರ್ ಗೆ ವರ್ಗಾವಣೆ ಗೊಳ್ಳುವ ವಾಗಳ ಮುಂದಿನ ಎಲ್ಲ ಸೇವೆಗಳೂ ಈ ಸಾಫ್ಟ್ ವೇರ್ ಮೂಲಕ ಮಾತ್ರ ಸಾಧ್ಯ. ಇದು ಸ್ಮಾರ್ಟ್ ಮೂವ್ ಮೂಲಕ ಲಭಿಸುವುದಿಲ್ಲ.
2. ವಾಹನ್ ಗೆ ವ್ಗಾವಣೆಗೊಳ್ಳುವ ವಾಹನಗಳ ಮಾಹಿತಿ ಗಳುಠಿಚಿಡಿivಚಿhಚಿಟಿ.iಟಿವೆಬ್ ಸೈಟ್ ನಲ್ಲೂ mಠಿಚಿಡಿivಚಿhಚಿಟಿಎಂಬ ಆಪ್ ನಲ್ಲೂ ಡಿಜಿಲಾಕರ್ ನಲ್ಲೂ ಲಭ್ಯವಿದೆ. ವಾಹನ ಮಾಲೀಕರು ಇವನ್ನು ಪರಿಶೀಲಿಸಿ ಖಚಿತಪಡಿಸಕೊಳ್ಳಬಹುದಾಗಿದೆ. ಡಾಟಾದಲ್ಲಿ ಏನಾದರೂ ಲೋಪದೋಷಗಳಿದ್ದಲ್ಲಿ ಸಂಬಂಧಪಟ್ಟ ಆರ್.ಟಿ.ಒ/ಜೋಯಿಂಟ್ ಆರ್.ಟಿ.ಒ.ಗೆ ತಿಳಿಸಬೇಕು.
3. ಎಲ್ಲ ಸೇವೆಗಳಿಗೂ ಆನ್ ಲೈನ್ ರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಶುಲ್ಕ/ತೆರಿಗೆಇತ್ಯಾದಿ ಆನ್ ಲೈನ್ ರೂಪದಲ್ಲೇ ಪಾವತಿಸಬೇಕು. ನೆಟ್ ಬ್ಯಾಂಕಿಂಗ್,ಕಾರ್ಡ್ ಪೇಮೆಂಟ್, ಮೊಬೈಲ್ ಪೇಮೆಂಟ್(ಎನ್.ಐ.ಪಿ.) ತ್ಯಾದಿ ವಾಹನ್ ಸಾಫ್ಟ್ ವೇರ್ ನಲ್ಲಿ ಲಭ್ಯವಿದೆ.
4. ವಾಹನ್ ಸಾಫ್ಟ್ ವೇರ್ ನಲಲಿ ಯಾವುದೇ ಸೇವೆ ಪಡೆಯುವಲ್ಲಿ, ಮೊದಲಿಗೆ ವಾಹನ ಮಾಲೀಕರ ಮೊಬೈಲ್ ನಂಬ್ರ ಅಪ್ ಡೇಟ್ ನಡೆಸಬೇಕು. ವಾಹನಮಾಲೀಕರಲ್ಲದೆ ಇತರರ ನಂಬ್ರ ಅಪ್ ಡೇಟ್ ನಡೆಸಕೂಡದು.
5. ಮೊದಲ ಬಾರಿಗೆ ತೆರಿಗೆ ಪಾವತಿಗೆ ಯತ್ನಿಸಿದಾಗ, ಕೆಲವು ವಾಹನಗಳಿಗೆ ತೆರಿಗೆ ಸಹಜವಾಗಿಯೇ ದಾಖಲಾಗದೇ ಇರುವುದು, ಯಾ ತೆರಿಗೆ ವ್ಯತ್ಯಾಸ ಕಂಡುಬರುವುದು, ಯಾ ತೆರಿಗೆಯ ಕಾಲಾವಧಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿಕಚೇರಿಯನ್ನು ಸಂಪರ್ಕಿಸಬೇಕು. ಇಂಥಾ ಸಮಸ್ಯೆಗಳಿದ್ದಲ್ಲಿ ಒಮ್ಮೆ ಪರಿಹಾರಗೊಂಡಲ್ಲಿ ಮತ್ತೆ ಕಾಣಿಸದು.
6. 4 ಅಂಕಗಳಿಗಿಂತ ಕಡಿಮೆ ಸಂಖ್ಯೆಯಿರುವ ವಾಹನನೋಂದಣಿನಂಬ್ರಗಳಲ್ಲಿ ಸೊನ್ನೆ ಸೇರಿಸಿ ಸಲ್ಲಿಸಬೇಕು. ಉದಾಹರಣೆಗೆ-ಕೆ.ಎಲ್ 01-ಎ.50 ಎಂಬ ನಂಬ್ರ .ಞಟ01ಂ0050 ಎಂಬ ರೀತಿ ಬಳಸಬೇಕು.
7. ವಾಹನ್ ಸಾಫ್ಟ್ ವೇರ್ ನ್ನು ಸೇವೆಗಾಗಿ ಬಳಸುವ ನಿಟ್ಟಿನಲ್ಲಿ ಕೈಹೊತ್ತಗೆಯೊಂದು ಇಲಾಖೆಯhಣಣಠಿ://mvಜ.ಞeಡಿಚಿಟಚಿ.gov.iಟಿ.ಉov.Iಟಿವೆಬ್ ಸೈಟ್ ನಲ್ಲಿ ಲಭ್ಯವಿದೆ.

