HEALTH TIPS

ಉಪಚುನಾವಣೆ : ಸಿದ್ದತೆಗಳು ಪೂರ್ಣ


             ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಅ.21ರಂದು ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.
      ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚುನಾವಣೆ ಸಾಮಾಗ್ರಿಗಳ ಸಂಗ್ರಹ ಮತ್ತು ವಿತರಣೆ ನಡೆಯಲಿದ್ದು, ಮತಗಣನೆಯೂ ಇದೇ ಶಾಲೆಯಲ್ಲಿ ನಡೆಯಲಿದೆ. ಮತಗಣನೆಯ ದಿನ ಮಾಧ್ಯಮ ಕೇಂದ್ರವೂ ಇಲ್ಲಿ ಚಟುವಟಿಕೆ ನಡೆಸಲಿದೆ. ಜಿಲ್ಲಾಧಿಕಾರಿ, ಚುನಾವಣೆ ನಿರೀಕ್ಷಕರು, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆ ಅಧಿಕಾರಿ,ಉಪಚುನಾವಣೆ ಅಧಿಕಾರಿಗಳು ಇಲ್ಲಿರುವರು. ಈ ಶಾಲೆಯಲ್ಲಿ 4 ಸ್ಟ್ರಾಂಗ್ ರೂಂಗಳಲ್ಲಿ 258 ವಿದ್ಯುನ್ಮಾನ ಮತಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ. ಅ.20ರಂದು ಬೆಳಿಗ್ಗೆ 9.30ರಿಂದ 18 ವಿತರಣೆ ಕೇಂದ್ರಗಳಿಂದ ಪೋಲಿಂಗ್ ಸಿಬ್ಬಂದಿಗೆ ಮತದಾನ ಸಾಮಾಗ್ರಿಗಳನ್ನು ವಿತರಿಸಲಾಗುವುದು. ಕರ್ತವ್ಯದಲಿರುವ ಸಿಬ್ಬಂದಿಗೆ ಈ ಕೇಂದ್ರಕ್ಕೆ ತಲಪುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕೈಕಂಬದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಒದಗಿಸಲಾಗುತ್ತದೆ. ಕರ್ತವ್ಯದ ಸಿಬ್ಬಂದಿಗೆ ಕುಟುಂಬಶ್ರೀ ವತಿಯಿಂದ ಆಹಾರ ಪೂರೈಕೆ ನಡೆಯಲಿದೆ.
     ಸಮಸ್ಯಾತ್ಮಕ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗುವುದು. 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಇರುವುದು. 53 ಬೂತ್ ಗಳಲ್ಲಿ ಮೈಕ್ರೋ ಒಬ್ಸರ್ ವರ್ ಗಳನ್ನು ನೇಮಿಸಲಾಗಿದೆ. ಈ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ (198) ಬುರ್ಖಾಧಾರಿ ಮಹಿಳೆಯರ ಗುರುತು ಪತ್ತೆಗೆ ಮಹಿಳಾ ಸಿಬ್ಬಂದಿಗಳನ್ನು ಸಿದ್ದಗೊಳಿಸಲಾಗಿದ್ದು, ಇವರಿಗೆ ಬೇಕಾದ ಚುನಾವಣೆ ಕರ್ತವ್ಯ ಸರ್ಟಿಫಿಕೆಟ್ ವಿತರಿಸಲಾಗಿದೆ. 
    ಚುನಾವಣೆಗೆ ನೇಮಕಗೊಂಡಿರುವ ಸಿಬ್ಬಂದಿಗೆ ಬೇಕಾದ ತರಬೇತಿಯೂ ಈಗಾಗಲೇ ಪೂರ್ಣಗೊಂಡಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಅಕ್ರಮಮತದಾನ ತಡೆಯುವ ನಿಟ್ಟಿನಲ್ಲಿ ಎಲ್ಲ ಮತಗಟ್ಟೆ ಏಜೆಂಟರಿಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
     33 ಅಂಚೆ ಮತದಾನ ಹೊಂದಿರುವ ಈ ಕ್ಷೇತ್ರದಲ್ಲಿ ಈಗ ಕೇವಲ ಒಂದು ಅರ್ಜಿ ಲಭಿಸಿದೆ ಎಂದು ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್ ತಿಳಿಸಿರುವರು. 
    ಅ.21ರಂದು ಮತದಾನ ನಡೆಯಲಿದ್ದು, ಬೆಳಿಗ್ಗೆ 5.30ಕ್ಕೆ ಪ್ರಹಸನ ಮತದಾನ(ಮೋಕ್ ಪೋಲಿಂಗ್) ಆರಂಭಗೊಳ್ಳಲಿದೆ.(ಮತದಾನಕ್ಕಿಂತ 90 ನಿಮಿಷ ಮೊದಲು)5.30ಕ್ಕೆ ಮತಗಟ್ಟೆ ಏಜೆಂಟರೂ ಹಾಜರಾಗುವಂತೆ ಚುನಾವಣೆ ಅಧಿಕಾರಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries